Friday, December 13, 2024

Latest Posts

1300 ರೈತರಿಂದ ತೈಲ ಕಂಪನಿ ಆರಂಭ

- Advertisement -

ರೈತರು ಬೆಳೆದ ಬೆಳೆಗೆ ತಮ್ಮದೆ ಬ್ರಾಂಡ್ ಮಾಡಿ ಮಾರಾಟ ಮಾಡುವುದು ಅಪರೂಪ, ಅದರಲ್ಲೂ ಸಾವಯುವ ಕಲ್ಪನೆ ಮಾದರಿಯಲ್ಲಿ ,ಅಡುಗೆ ಎಣ್ಣೆ ಮತ್ತು ಔಷದೀಯ ತೈಲಗಳನ್ನು ತಯಾರಿಸುವ ಕಂಪನಿಯೊoದು ರಾಯಚೂರಿನ ಸಿಂಧನೂರಿನ ರೈತರಿಂದ ಆರಂಭವಾಗಿದೆ . ಇದರಲ್ಲಿ
1300 ರೈತರು ಒಟ್ಟಿಗೆ ಸೇರಿ ಕಂಪನಿಯನ್ನು ಶುರುಮಾಡಿದ್ದಾರೆ . ಅಲ್ಪ ಬಂಡವಾಳದಿಂದ ಆರಂಭವಾದ ಕಂಪನಿ ಈಗ ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುತ್ತಿದೆ.

ಯಂತ್ರಗಳ ಮುಖಾಂತರ ಗಾಣವನ್ನು ತಿರುಗಿಸಿ ಅಡುಗೆ ಎಣ್ಣೆ, ಆರೋಗ್ಯಕ್ಕೆ ಉತ್ತಮವಾದ ಔಷಧಿ ಗುಣಹೊಂದಿರುವ ತೈಲ ಗಳನ್ನು ತಯಾರಿಸುವ ಘಟಕಗಳನ್ನು ನೋಡಿದರೆ ಯಾರೋ ಒಬ್ಬ ಬಂಡವಾಳವನ್ನು ಹಾಕಿ ಕಂಪನಿಯನ್ನು ನಡೆಸುತ್ತಿದ್ದಾನೆ ಅನ್ನಿಸುತ್ತದೆ, ಆದರೆ ಇದು ಒಬ್ಬ ನಡೆಸುತ್ತಿರುವ ಕಂಪನಿಯಲ್ಲ . ಇಲ್ಲಿರುವುದು ಒಟ್ಟು 1300 ರೈತರು ತಮ್ಮ ಸ್ವಂತ ಪರಿಶ್ರಮದಿಂದ ಕಟ್ಟಿರುವಂತಹ ಸ್ವಾಸ್ಥ್ಯ ರೈತರ ಉತ್ಪಾದಕ ಕಂಪನಿಯಾಗಿದೆ .

ಆರಂಭದಲ್ಲಿ 10 ಜನರು ಸೇರಿ ಕಂಪನಿ ಆರಂಭಿಸಲು ಚಿಂತನೆ ಮಾಡಿದ್ದರಂತೆ ನಂತರ 1300 ರೈತರ ತಂಡವು ಶುರುವಾಗಿ ಪ್ರತಿ ಸದಸ್ಯರಿಗೆ 1000 ಹಣವನ್ನು ತೆಗದುಕೊಂಡು 13 ಲಕ್ಷ ಬಂಡವಾಳ ಹಾಕಿ ಹಾಕಿ ಕಂಪನಿಯನ್ನು 2019 ರಲ್ಲಿ ಶುರು ಮಾಡಿದರು , ಈ ರೈತರು ಸರ್ಕಾರ ಹಾಗು ನಬಾರ್ಡ್ ಸಹಾಯವನ್ನು ಪಡೆದು ಶುರುಮಾಡಿದರಂತೆ , ಇನ್ನೂ ಕಂಪನಿಗೆ ನಬಾರ್ಡ 10 ಲಕ್ಷ ಸಹಾಯಸ್ತವನ್ನು ನೀಡಿದೆ ಎಂದು ರೈತರು ಹೇಳಿದ್ದಾರೆ . ಇನ್ನು ರೈತರು 2020-21 ರಲ್ಲಿ 52 ಲಕ್ಷ ವ್ಯಾಪಾರ ಮಾಡಿ 2 ಲಕ್ಷ ಆದಾಯವನ್ನು ಗಳಿಸಿದ್ದೇವೆಂದು ಸ್ವಾಸ್ತö್ಯ ಉತ್ಪಾದಕ ಕಂಪನಿಯ ನಿರ್ದೇಶಕ ವೀರಭದ್ರೇಗೌಡ ಖುಷಿ ವ್ಯಕ್ತಪಡಿಸಿದ್ದಾರೆ .

ಈ ತೈಲ ಘಟಕದಲ್ಲಿ ರೈತರು ಬೆಳೆದ ಎಣ್ಣೆ ಕಾಳು, ಮನೆಯಲ್ಲಿ ಬಳಕೆ ಮಾಡುವ ಕೊಬ್ಬರಿ, ಕುಸಬಿ, ಶೇಂಗಾ ಕಾಳುಗಳನ್ನು ಎಣ್ಣೆಯನ್ನಾಗಿ ತಯಾರಿಸುತ್ತಿದ್ದಾರೆ, ಸಣ್ಣ ಮಿಲ್ ಆಗಿ ಆರಂಭವಾದ ಕಂಪನಿಯು ಈಗ ಸಿಂಧನೂರು ತಾಲೂಕಿನಲ್ಲಿ ಮೂರು ಕಡೆ ಮಿಲ್ ಗಳನ್ನು ಹೊಸದಾಗಿ ಪುನರಾರಂಭಿಸಿದ್ದಾರೆ ಇಲ್ಲಿ ತಯಾರಾಗುವ ಅಡುಗೆ ಎಣ್ಣೆ ಉತ್ತಮ ಗುಣಮಟ್ಟ ಹಾಗು ಸಾವಯವ ರೀತಿಯಲ್ಲಿ ತಯರಾಗಿದ್ದರಿಂದ ರಾಜ್ಯದ ವಿವಿಧಡೆಯಿಂದ ಜನರು ಇಲ್ಲಿಗೆ ಬಂದು ಎಣ್ಣೆಯನ್ನು ಖರೀದಿಸುತ್ತಿದ್ದಾರೆ,
ಜೊಟೆಗೆ ಆನ್ ಲೈನ್ ಸೌಲಭ್ಯವನ್ನು ಸಹ ನೀಡಲಾಗಿದೆ . ಒಟ್ಟು 15 ಲಕ್ಷ ರೂಪಾಯಿ ವಹಿವಾಟು ನಡೆಯುತ್ತಿದೆ, ಇನ್ನೂ ಸಾಕಷ್ಟು ಬೇಡಿಕೆ ಇದೆ ಎನ್ನುತ್ತಾರೆ, ಕಂಪನಿಯ ನಿರ್ದೇಶಕರು.

ಕಂಪನಿಯಿಂದ 18 ಗಿರ್ ತಳಿಯ ಆಕಳುಗಳನ್ನು ಸಾಕಿದ್ದು ಆಕಳು ಹಾಲು, ಮೂತ್ರ, ಗಂಜಲದಿಂದ ಗೋ ಆಧಾರಿತ ಉತ್ಪನ್ನ್ನು ತಯಾರಿಸುತ್ತಿದ್ದಾರೆ, ಮುಖ್ಯವಾಗಿ ಗೋ ರ‍್ಕಾ, ವಿಭೂತಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದು ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ, ಇನ್ನೂ ಕಂಪನಿಯಿಂದ ರೈತರಿಂದ ಬೇರೆ ಬೇರೆ ಉದ್ಯಮಿಗಳಿಗೆ, ಕಂಪನಿಗಳಿಗೆ ಭತ್ತ. ಶೇಂಗಾ ಸೇರಿದಂತೆ ಬೆಳೆದ ಬೆಳೆಯನ್ನು ಸ್ವಾಸ್ಥ್ಯ ಕಂಪನಿಯಿಂದಲೇ ಮಾರಾಟ ಮಾಡಿ ರೈತರಿಗೆ ಲಾಭ ಮಾಡಿಕೊಡಲಾಗುತ್ತಿದೆ, ಇನ್ನೂ ಇಲ್ಲಿ ಅಡುಗೆ ಎಣ್ನೆ ತಯಾರಿಸಲು ರೈತರಿಂದ ಕಚ್ಚಾ ವಸ್ತುಗಳ ಖರೀದಿ ಒಂದು ಕಡೆಯಾದರೆ ಕಂಪನಿಯ ರೈತರು ನೇರವಾಗಿ ಬಂದು ತಮ್ಮ ಮಿಲ್ ಗಳನ್ನು ತಾವು ಬೆಳೆದ ಎಣ್ಣೆ ಕಾಳುಗಳಿಂದ ಎಣ್ಣೆಯನ್ನು ಹಾಕಿಸಿಕೊಂಡು ಹೋಗಬಹುದಾಗಿದೆ, ಇಲ್ಲಿ ಒಂದು ಕೆಜಿ ಅಡುಗೆ ಎಣ್ಣೆಯನ್ನು ತಯಾರಿಸಿ ಕೊಟ್ಟರೆ 5 ರೂಪಾಯಿ ದರ ನಿಗಿದಿ ಮಾಡಲಾಗುತ್ತಿದೆ. ಇದು ಜನಸಾಮಾನ್ಯರಿಗೆ ತುಂಬಾ ಅನುಕೂಲವಾಗಿದೆ. ಜೊತೆಗೆ ರಾಜ್ಯದ ಎಲ್ಲಾ ರೈತರಿಗೂ ಈ ಕಂಪನಿ ಮಾದರಿಯಾಗಿದ್ದು ಒಗ್ಗಟ್ಟಿನಿಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಈ ರೈತರು ತೋರಿಸಿಕೊಟ್ಟಿದ್ದಾರೆ .

ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು.

- Advertisement -

Latest Posts

Don't Miss