Sunday, October 5, 2025

Latest Posts

ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆ ಆನ್‌ಲೈನ್ ಬುಕ್ಕಿಂಗ್ !

- Advertisement -

ತಿರುವನಂತಪುರಂ : ವಿಶ್ವವಿಖ್ಯಾತ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿ ಪ್ರಸ್ತುತ ವಾರ್ಷಿಕ ತೀರ್ಥಯಾತ್ರೆ ನಡೆಯುತ್ತಿದೆ. ಈ ತೀರ್ಥಯಾತ್ರೆಯಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರವು ವರ್ಚುವಲ್ ಕ್ಯೂ ಬುಕ್ಕಿಂಗ್‌ ವ್ಯವಸ್ಥೆಯನ್ನು ಆರಂಭ ಮಾಡಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ಶಬರಿಮಲೆಯಲ್ಲಿ ಜನಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇರಳ ಸರ್ಕಾರ ಕೈಗೊಂಡಿರುವ ಈ ವರ್ಚುವಲ್‌ ಕ್ಯೂ ವ್ಯವಸ್ಥೆಯಲ್ಲಿ ಶಬರಿಮಲೆ ಯತ್ರಾರ್ಥಿಗಳಿಗೆ ನಿರ್ದಿಷ್ಟ ಸಮಯವನ್ನು ಗೊತ್ತು ಮಾಡುವ ವ್ಯವಸ್ಥೆಯಾಗಿದೆ. ಈ ಮೂಲಕ ದೇವಾಲಯದಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡಲಾಗುತ್ತದೆ. ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಅನ್ನು ಆನ್‌ಲೈನ್‌ ಮೂಲಕ ಮಾಡಲಾಗು‌ತ್ತದೆ.

ಇನ್ನು ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಪಡೆಯಲು ಆನ್‌ಲೈನ್‌ ಮೂಲಕ ಅವಕಾಶ ದೊರೆಯದವರಿಗೆ, ನೀಲಕಲ್ಲಿನಲ್ಲಿ ಸ್ಥಳದಲ್ಲೇ ಬುಕ್ಕಿಂಗ್‌ ಮಾಡಲು ಪೊಲೀಸರು ವ್ಯವಸ್ಥೆಯನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ.

ಅಯ್ಯಪ್ಪನ ದರ್ಶನಕ್ಕೆ ಆನ್‌ಲೈನ್ ಬುಕ್ಕಿಂಗ್ ಮಾಡುವುದು ಹೇಗೆ?

sabarimalaonline.org ವೆಬ್‌ಸೈಟ್‌ಗೆ ಭೇಟಿ ನೀಡಿ, ಆ ಬಳಿಕ ರಿಜಿಸ್ಟರ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ, ನಂತರ ಕಾಣಿಸುವ ಪುಟದಲ್ಲಿ ನಿಮ್ಮ ಅಗತ್ಯ ದಾಖಲೆಗಳನ್ನು ಉಲ್ಲೇಖ ಮಾಡಬೇಕು. ಹೆಸರು, ಹುಟ್ಟಿದ ದಿನಾಂಕ, ವಿಳಾಸ, ದೇಶ, ಪಿನ್‌ ಕೋಡ್‌ ಹಾಕಿ, ಗುರುತಿನ ಪುರಾವೆ, ಸ್ಕ್ಯಾನ್‌ ಮಾಡಿದ ಫೋಟೋ, ಫೋನ್‌ ನಂಬರ್‌ ಹಾಕಿ, ಆ ಬಳಿಕ ಇಮೇಲ್‌ ಸಂಖ್ಯೆ ನಮೂದಿಸಿದ ನಂತರ ಪಾಸ್‌ವರ್ಡ್ ರಚನೆ ಮಾಡಿ, ಅದನ್ನು ದೃಢೀಕರಣ ಮಾಡಬೇಕು ಹಾಗೂ ನಿಯಮಗಳು/ಷರತ್ತನ್ನು ಒಪ್ಪುತ್ತೀರಿ ಎಂಬ ಬಾಕ್ಸ್‌ ಮೇಲೆ ಕ್ಲಿಕ್‌ ಮಾಡಿದ ನಂತರ ಕಂಟಿನ್ಯೂ ಮೇಲೆ ಕ್ಲಿಕ್‌ ಮಾಡಿ. ಆ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ

ಒಟಿಪಿಯನ್ನು ನಮೂದಿಸಿ, ಖಾತೆಯನ್ನು ಪರಿಶೀಲಿಸಿದರೆ ನೋಂದಣಿ ಪ್ರಕ್ರಿಯೆ ಮುಗಿದು ಹೊಗುತ್ತದೆ.

ನಂತರ ಲಾಗಿನ್ ಮಾಡಿಕೊಂಡು. ಸರಿಯಾದ ಸಮಯ ನೋಡಿ ನಿಮ್ಮ ಬುಕ್ಕಿಂಗ ಅನ್ನು ನೀವೇ ಮಾಡಿಕೊಳ್ಳಿ.ಯಾವುದೇ ಅನುಮಾನಗಳಿದ್ದರೆ ಸಹಾಯವಾಣಿ 702800100 ಸಂಖ್ಯೆಗೆ ಕರೆ ಮಾಡಬಹುದು. ಯಾತ್ರೆ ಸಮಯದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಅಡಚಣೆ ಉಂಟಾದರೆ ಕೇರಳ ಪೊಲೀಸರ 7025800100 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು.

- Advertisement -

Latest Posts

Don't Miss