ಮಲೈ ಮಹದೇಶ್ವರ ದೇವಾಲಯ ಭಕ್ತರ ಪಾಲಿನ ಸ್ವರ್ಗ ,ಸಾವಿರಾರು ಭಕ್ತರು ಈ ಪವಿತ್ರ ಸ್ಥಳಕ್ಕೆ ಆಗಮಿಸುತ್ತಲೇ ಇರುತ್ತಾರೆ . ರಾಜ್ಯದಲ್ಲಿ ಅತಿಹೆಚ್ಚು ಆದಾಯ ತರುವಲ್ಲಿ ಎರಡನೇ ಸ್ಥಾನದಲ್ಲಿರುವ ಸುಪ್ರಸಿದ್ಧ ಧಾರ್ಮಿಕ ಸ್ಥಳ. ಮಲೈ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಈ ಬಾರಿ 1.67 ಕೋಟಿ ರುಪಾಯಿ ನಗದು ಹಣ ಸಂಗ್ರಹವಾಗಿದೆ. ಈ ಸುಪ್ರಸಿದ್ದ ಮಲೈಮಹದೇಶ್ವರ ಬೆಟ್ಟ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ಬರುತ್ತದೆ . ಇತ್ತೀಚೆಗೆ ನಡೆದ ದೀಪಾವಳಿ ಜಾತ್ರೆಯ ಬಳಿಕ 28 ದಿನಗಳ ಸಂಗ್ರಹ ಇದಾಗಿದೆ .ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ .
ಶುಕ್ರವಾರ ಬೆಳಿಗ್ಗೆ 7 ಗಂಟೆಯಿAದ ರಾತ್ರಿ 10 ರವರೆಗೆ ಮಲೈಮಹದೇಶ್ವರ ಬೆಟ್ಟದ ವಾಣಿಜ್ಯ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು .
ಈ ಹುಂಡಿ ಎಣಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳು ಕುಂಬವನ್ನು ಹೊತ್ತು ಸಾಗಿದರು ,ಹುಂಡಿ ಎಣಿಕೆಯಲ್ಲಿ ಈ ಬಾರಿ 1,67,07,270 ರೂ ನಗದು ಹಣದ ಜೊತೆಗೆ ದೇಗುಲಕ್ಕೆ 55 ಗ್ರಾಂ ಚಿನ್ನ ಹಾಗು 2,05 ಕೆಜಿ ಬೆಳ್ಳಿ ಕಾಣಿಕೆಯಾಗಿ ಬಂದಿದೆ. ಕೊರೋನಾ ಆರ್ಥಿಕ ಸಂಕಷ್ಟದ ಜೊತೆಗೆ ಈ ಬಾರಿಯೂ ಭಕ್ತರು ಧಾರಾಳವಾಗಿ ಕಾಣಿಕೆ ಅರ್ಪಿಸಿದ್ದಾರೆ ಎಂಬುದು ಖುಷಿಪಡುವ ವಿಷಯವಾಗಿದೆ .
ಸಿಸಿ ಕ್ಯಾಮರಾದ ಕಣ್ಗಾವಲಿನಲ್ಲಿ ಪ್ರಾಧಿಕಾರದ ಸಿಬ್ಬಂದಿ ಹಾಗು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಥಳೀಯ ಶಾಖೆ ಸಿಬ್ಬಂದಿಗಳು ಹುಂಡಿ ಎಣಿಕೆ ಕಾರ್ಯವನ್ನು ನಡೆಸಿದರು . ಈ ವೇಳೆ ಮಲೈಮಹದೇಶ್ವರ ಬೆಟ್ಟ ಠಾಣೆಯ ಪೊಲೀಸರು ಬಿಗಿ ವ್ಯವಸ್ತೆ ಕಲ್ಪಿಸಿದ್ದರು , ಅದೇ ರೀತಿ ಮಲೈಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಬಸವರಾಜು ಈ ಹುಂಡಿ ಎಣಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




