Friday, November 14, 2025

Latest Posts

3 ‘ಕೃಷಿ ಕಾನೂನು’ಗಳ ರದ್ದತಿ ಮಸೂದೆಗೆ ಅಂಗೀಕಾರ

- Advertisement -

ನವದೆಹಲಿ: ಮಸೂದೆಯ ಬಗ್ಗೆ ಚರ್ಚೆ ನಡೆಸಬೇಕೆಂದು ಪಕ್ಷಗಳು ಒತ್ತಾಯಿಸಿದ್ದರಿಂದ ಸಂಸತ್ತಿನಲ್ಲಿ ಭಾರಿ ಗದ್ದಲದ ನಡುವೆ ಕೃಷಿ ಕಾನೂನುಗಳ ರದ್ದತಿ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.

ಆದಾಗ್ಯೂ, ಮಸೂದೆಯನ್ನು ಸಂಸತ್ತಿನ ಕೆಳಮನೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿಯವರು ಗುರುನಾನಕ್ ಜಯಂತಿಯಂದು ರೈತರು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವಂತ ಮೂರು ಕೃಷಿ ಮಸೂದೆಗಳನ್ನು ವಾಪಾಸ್ ಪಡೆಯುತ್ತಿರೋದಾಗಿ ಘೋಷಿಸಿದ್ದರು. ಈ ಬಳಿಕ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮೂರು ಕೃಷಿ ಮಸೂದೆಗಳನ್ನು ವಾಪಾಸ್ ಪಡೆಯುವ ಮಸೂದೆಗೆ ಒಪ್ಪಿಗೆ ಸೂಚಿಸಲಾಗಿತ್ತು.

ಈ ಎಲ್ಲಾ ವಿದ್ಯಮಾನದ ಬಳಿಕ ಇಂದು ಲೋಕಸಭೆಯಲ್ಲಿ ಕೃಷಿ ಸಚಿವರು ವಿವಾದಿತ ಮೂರು ಕೃಷಿ ಮಸೂದೆಗಳನ್ನು ವಾಪಾಸ್ ಪಡೆಯೋದಕ್ಕೆ ಮಸೂದೆಯನ್ನು ಮಂಡಿಸಿದರು. ಯಾವುದೇ ಚರ್ಚೆಯಿಲ್ಲದೇ ಲೋಕಸಭೆಯಲ್ಲಿ ಇಂದು ಮೂರು ಕೃಷಿ ಮಸೂದೆಗಳನ್ನು ವಾಪಾಸ್ ಪಡೆಯೋದ್ಕಕೆ ಒಪ್ಪಿಗೆ ಸೂಚಿಸಲಾಗಿದೆ. ಆದ್ರೇ ವಿಪಕ್ಷಗಳು ಈ ಕಾಯ್ದೆಗಳ ಕುರಿತಂತೆ ಚರ್ಚೆ ನಡೆಸೋದಕ್ಕೆ ಸಂಸತ್ ನಲ್ಲಿ ಗದ್ದಲ ಎಬ್ಬಿಸಿತು. ಇದರ ನಡುವೆಯೂ ಮಸೂದೆ ಹಿಂಪಡೆಯೋದಕ್ಕೆ ಒಪ್ಪಿಗೆ ಸೂಚಿಸಲಾಗಿದೆ.

- Advertisement -

Latest Posts

Don't Miss