ಇಳಿವಯಸ್ಸಿನಲ್ಲಿ ಈಜುವ  ಮೂಲಕ ಎಲ್ಲರ ಗಮನ ಸೆಳೆದ ಅಜ್ಜಿ..!

ತಮಿಳುನಾಡು : ತಮಿಳುನಾಡಿನ ನಾಮಕ್ಕಲ್  ಗ್ರಾಮದ 85 ವರ್ಷದ ಅಜ್ಜಿ ಒಬ್ಬರು ಈಜುವ ಮೂಲಕ ಫಿಟ್ ಆಗಿದ್ದಾರೆ. ತಮಿಳುನಾಡಿನ ನಾಮಕ್ಕಲ್  ಗ್ರಾಮದ ಪಾಪಜ್ಜಿ ಎನ್ನುವ ಅಜ್ಜಿ ಒಬ್ಬರು 85ರ ಇಳಿವಯಸ್ಸಿನಲ್ಲಿಯೂ ಬಾವಿಗೆ ಜಂಪ್ ಮಾಡಿ ಈಜುವ ಮೂಲಕ ಯಾವ ಈಜುಪಟುವಿಗು ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಹಾಗೂ  ಅವರು 5ನೇ ವಯಸ್ಸಿನಲ್ಲಿಯೇ ಈಜು ಕಲಿತಿದ್ದು,  ಅವರಿಂದ ಗ್ರಾಮದ ನೂರಾರು ಜನ ಈಜುವುದನ್ನು ಕಲಿತಿದ್ದಾರೆ,  ಈಗಲೂ ಸಹ ಅವರು ಮಕ್ಕಳಿಗೆ ಈಜು ಕಲಿಸುತ್ತಿದ್ದಾರೆ. ಈ 85ರ ಇಳಿವಯಸ್ಸಿನಲ್ಲೂ ಈಜುವುದರ ಮೂಲಕ ಯುವಕರಂತೆ ದೈಹಿಕವಾಗಿ ಪಿಟ್ನೆಸ್ ಅನ್ನು ಕಾಯ್ದುಕೊಂಡು ಆರೋಗ್ಯವಾಗಿರುವ ಅವರು  ಗಟ್ಟಿಗಿತ್ತಿಯಾಗಿದ್ದಾರೆ.

About The Author