Friday, April 18, 2025

Latest Posts

ಡಿಸೆಂಬರ್ 1 ರಿಂದ 4ರ ವರೆಗೆ ಬೆಂಗಳೂರಿಗೆ ಕರೆಂಟ್ ಶಾಕ್..?

- Advertisement -

ಡಿಸೆಂಬರ್ 1 ರಿಂದ ಡಿಸೆಂಬರ್ 4 ರವರೆಗೆ ಬೆಂಗಳೂರಿನ ದಕ್ಷಿಣ ಹಾಗೂ ಪಶ್ಚಿಮ ವಲಯದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತ ಮಾಡಿದೆ..
ಹೀಗಾಗಿ ಡಿಸೆಂಬರ್ 1 ರಿಂದ ಡಿಸೆಂಬರ್ 4ರವರೆಗೆ ನೀವು ವಿದ್ಯುತ್ ಬಳಸಿಕೊಂಡು ಯಾವುದೇ ಕೆಲಸ ಮಾಡಬೇಕು ಅಂದುಕೊಂಡ್ರು ಬೆಳಗ್ಗೆ ಹತ್ತು ಗಂಟೆಯ ಮುಂಚೆ ಅಥವಾ ಸಂಜೆ 5 ಗಂಟೆಯ ನಂತರ ಮಾಡಿಕೊಳ್ಳುವುದು ಸೂಕ್ತ.. ಇನ್ನು ಯಾವ ಯಾವ ದಿನ ಯಾವ ಯಾವ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಡಿಸೆಂಬರ್ 1 ರಂದು ವಿನಾಯಕ ಲೇಔಟ್, ನಾಗರಭಾವಿ 9ನೇ ಬ್ಲಾಕ್, ವಿದ್ಯಾಮಾನ ನಗರ, ಹೊಸಹಳ್ಳಿ, ಮಾಗಡಿ ರಸ್ತೆ, ವಿಘ್ನೇಶ್ವರ ನಗರ, ವಿನಾಯಕನಗರ, ಕುಮಾರಸ್ವಾಮಿ ಲೇಔಟ್ ಮತ್ತು ಜರಗನಹಳ್ಳಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಡಿಸೆಂಬರ್.2 ರಂದು ಚುಂಚಘಟ್ಟ, ಬೀರೇಶ್ವರ ನಗರ ಮತ್ತು ಕೋಣನಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ.
ಡಿಸೆಂಬರ್ 3 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಾಮಗಾರಿಗಳ ಹಿನ್ನೆಲೆ ಇಸ್ರೋ ಲೇಔಟ್, ಕತ್ರಿಗುಪ್ಪೆ ಮುಖ್ಯ ರಸ್ತೆ ಮತ್ತು ಬನಶಂಕರಿ 3ನೇ ಹಂತದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಬೆಸ್ಕಾಂ ಮುಂದಾಗಿದೆ.
ಡಿಸೆಂಬರ್ 4 ರಂದು ಪದ್ಮನಾಭನಗರ, ಹೊಸಕೆರೆಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿಯು  ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ.
ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ. ಮನೆಯಲ್ಲಿ ವಿದ್ಯುತ್ ಇಲ್ಲದಿದ್ದಲ್ಲಿ ವೈಫೈ ಸಿಗುವುದಿಲ್ಲ. ಅಲ್ಲದೇ ಲ್ಯಾಪ್​ಟಾಪ್ ಸೇರಿದಂತೆ ಇತರ ವಸ್ತುಗಳನ್ನು ಹೆಚ್ಚಿನ ಸಮಯ ಬಳಸುವುದು ಕಷ್ಟಕರವಾಗುತ್ತದೆ.

- Advertisement -

Latest Posts

Don't Miss