ರೈಮ್ಸ್ ಮೂವಿ ಟ್ರೈಲರ್ ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಿದೆ.

ಸಿನಿಮಾ : ಅಜಯ್ ರಾಜ್ ಹಾಗೂ ಶುಭ ಪೂಂಜಾ ರವರು ನಟಿಸಿರುವ ರೈಮ್ಸ್ ಸಿನಿಮಾದ ಟ್ರೈಲರ್ ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಿದ್ದು, ಅಜಿತ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಸಸ್ಪೆನ್ಸ್, ಕ್ರೈಂ, ಥ್ರಿಲ್ಲರ್ ಮೂವಿ ಇದಾಗಿದ್ದು ಈ ಮೂವಿಯಲ್ಲಿ ಪ್ರೀತಿ, ನೋವು, ಸಂಬಂಧಗಳು, ಮನುಷ್ಯನಲ್ಲಿರುವ ಮೃಗತ್ವ ಹಾಗೂ ಈಗೋ ಇವುಗಳನ್ನು ಒಳಗೊಂಡಿದ್ದು, ಒಬ್ಬ ಸೈಕೋ ಕಿಲ್ಲರ್ ಯಾವ ರೀತಿ ಯಾವುದೇ ಸಾಕ್ಷಾಧಾರಗಳಿಲ್ಲದೆ ಹೇಗೆ ಕೊಲೆ ಮಾಡುತ್ತಾ ಬರುತ್ತಾನೆ ಎಂಬುದು ಈ ಸಿನಿಮಾದಲ್ಲಿ ಎಳೆ ಎಳೆಯಾಗಿ ತೋರಿಸುವ ಪ್ರಯತ್ನ ನಡೆದಿದೆ.

ಈ ಸಿನಿಮಾದಲ್ಲಿ ಮಿಮಿಕ್ರಿ ಗೋಪಿ, ಸುಷ್ಮಾ ನಾಯರ್, ಅಪರ್ಣ, ಚನ್ನರಾಜು ರವರು ನಟನೆ ಮಾಡಿದ್ದು ಶಕ್ತಿ ಸಾಕ್ ರವರು ಸಂಗೀತ ನೀಡಿದ್ದಾರೆ. ಟಿ ಸಂತೋಷ್ ಅವರು ಎಡಿಟಿಂಗ್ ಮಾಡಿದ್ದಾರೆ ಒಟ್ಟಾರೆಯಾಗಿ ಈ ಸಿನಿಮಾ ಕ್ರೈಂ, ತ್ರಿಲ್ಲರ್ ,ಸಸ್ಪೆನ್ಸ್ ಇಂದ ಕೊಡಿರುವ ಮೂವಿ ಇದಾಗಿದೆ.

About The Author