Friday, July 11, 2025

Latest Posts

ಕಿರಿಕ್ ಕೀರ್ತಿಯ ಕಿರಿಕ್..!   

- Advertisement -

ಬೆಂಗಳೂರು: ಸದಾಶಿವನಗರದ  ಪಬ್ ನಲ್ಲಿ  ಕಿರಿಕ್ ಕೀರ್ತಿ ಯ ಮೇಲೆ ಬಿಯರ್ ಬಾಟಲಿನಿಂದ ಹಲ್ಲೆ. ಸದಾಶಿವನಗರದ ಪಬ್ ಗೆ ತನ್ನ ಸ್ನೇಹಿತರೊಡನೆ  ನಿನ್ನೆ ರಾತ್ರಿ ಕಿರಿಕ್ ಕೀರ್ತಿ ಹೋಗಿದ್ದರು. ಆ ವೇಳೆ ಪಕ್ಕದ ಟೇಬಲ್ ನ  ವ್ಯಕ್ತಿಯೊಬ್ಬ ಫೋಟೋವನ್ನು ತೆಗೆದಿದ್ದ, ಇದನ್ನು ಗಮನಿಸಿದ ಕಿರಿಕ್ ಕೀರ್ತಿ ಅದನ್ನು ಪ್ರಶ್ನಿಸಿದ್ದಾನೆ. ಆಗ ಆ ವ್ಯಕ್ತಿ ಕ್ಷಮೆ ಕೇಳಿದರು ಸುಮ್ಮನಾಗದೆ  ಅವನಿಗೆ ಬಾಯಿಗೆ ಬಂದಹಾಗೆ  ಬಿದ್ದಿದ್ದಾನೆ, ಕ್ಷಮೆ ಕೇಳಿದರೆ ಸುಮ್ಮನಾಗದೆ  ಬೈಯುತ್ತಿದ್ದ ಹಾಗೂ  ಮೊಬೈಲ್ ಕಸಿದುಕೊಳ್ಳಲು ಹೋದಾಗ ರೋಸಿಹೋದ ಆ ವ್ಯಕ್ತಿ ಬಿಯರ್ ಬಾಟಲಿ ನಿಂದ ಕಿರಿಕ್ ಕೀರ್ತಿಯ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾನೆ. ಇದು ಸರಿಸುಮಾರು  12:30 ರ ವೇಳೆ  ನಡೆದಿದ್ದು, ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

- Advertisement -

Latest Posts

Don't Miss