ಸ್ವಿಜರ್ಲ್ಯಾಂಡ್: ಯಾವುದೇ ನೋವು ತೊಳಲಾಟ ವಿಲ್ಲದೆ ಕೇವಲ ಒಂದೇ ನಿಮಿಷದಲ್ಲಿ ಸುಖವಾದ ಸಾವು ಕಾಣಲು ಶವಪೆಟ್ಟಿಗೆ ಮಾದರಿಯ ಸಾರ್ಕೊ ಕ್ಯಾಫ್ಸೂಲ್ ಸ್ವಿಜರ್ಲ್ಯಾಂಡ್ ನಲ್ಲಿ ಕಾನೂನು ಮಾನ್ಯತೆ ಸಿಕ್ಕಿದೆ.
ಅಚ್ಚರಿ ಎನಿಸಿದರೂ ಇದು ನಿಜ ಈಗಾಗಲೇ ಎಲ್ಲಾ ಕಾನೂನಿನ ಪರೀಕ್ಷೆಗಳನ್ನು ಮಾಡಿದ್ದು ಇದರ ಸೇವೆಗೆ ಮುಂದಿನ ವರ್ಷದಿಂದಲೇ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆ ಇದೆ. ಸುದೀರ್ಘ ಅನಾರೋಗ್ಯ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ವೈದ್ಯರ ಸಲಹೆಯ ಮೇರೆಗೆ ಅಥವಾ ಇಚ್ಛಾ ಮರಣಕ್ಕೆ ಕೆಲ ದೇಶಗಳು ಅನುಮತಿಯನ್ನು ನೀಡಿದೆ. ಕಳೆದ ಒಂದು ವರ್ಷದಲ್ಲಿ ಸ್ವಿಜರ್ಲ್ಯಾಂಡ್ ನಲ್ಲಿ 1300 ಮಂದಿ ಈ ಸೇವೆಯನ್ನು ಪಡೆದಿದ್ದಾರೆ. ಡಾ. ಫಿಲಿಫ್ ನಿಟಶ್ಕೇ ರವರು ಈ ಸಾರ್ಕೊ ಸಾಧನವನ್ನು ಅಭಿವೃದ್ಧಿಪಡಿಸಿದರು. ಇಚ್ಛಾಮರಣ ಹೆಚ್ಚಿಸುವ ವ್ಯಕ್ತಿಗಳು ಸಾರ್ಕೊ ಹೆಸರಿನ ಕ್ಯಾಫ್ಸೂಲ್ ಒಳಹೊಕ್ಕ ಬಳಿಕ ಉಸಿರಾಡಲು ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ತನ್ಮೂಲಕ ರಕ್ತದಲ್ಲಿ ಕಾರ್ಬನ್ ಡೈಆಕ್ಸೈಡ್ ಅನ್ನು ಹೆಚ್ಚಿಸುತ್ತದೆ ಇದರಿಂದ ವ್ಯಕ್ತಿಯ ಸರಳ ಸಾವು ಸಂಭವಿಸುತ್ತದೆ. ಈ ಪ್ರಕ್ರಿಯೆ ಕೇವಲ ಒಂದೇ ನಿಮಿಷದಲ್ಲಿ ಮುಕ್ತಾಯವಾಗುತ್ತದೆ.