ನವದೆಹಲಿ : ಮೋದಿ ಸರ್ಕಾರ ರೈತರಿಗಾಗಿ ಅನೇಕ ಯೋಜನೆಗಳನ್ನ ನಡೆಸುತ್ತಿದೆ. ಅದ್ರಲ್ಲಿ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಕೂಡ ಒಂದು. ಮೋದಿ ಸರ್ಕಾರದ ಈ ಯೋಜನಡೆಯಡಿ, ರೈತರು ಟ್ರ್ಯಾಕ್ಟರ್ ಖರೀದಿಸಲು ಸಹಾಯ ಪಡೆಯಬಹುದು.
ಬೇಸಾಯಕ್ಕಾಗಿ ಅರ್ಧ ಬೆಲೆಗೆ ಟ್ರ್ಯಾಕ್ಟರ್ ಖರೀದಿಸಬಹುದು. ವಾಸ್ತವವಾಗಿ, ಈ ಯೋಜನೆಯಲ್ಲಿ, ಕೇಂದ್ರ ಸರ್ಕಾರವು ಹೊಸ ಟ್ರ್ಯಾಕ್ಟರ್ʼಗಳನ್ನ ಖರೀದಿಸಲು ಶೇಕಡಾ 50ರವರೆಗೆ ಸಬ್ಸಿಡಿಯನ್ನ ಒದಗಿಸುತ್ತದೆ.
ಆರ್ಥಿಕ ಅಡಚಣೆಯಿಂದ ಟ್ರ್ಯಾಕ್ಟರ್ ಖರೀದಿಸಲು ಸಾಧ್ಯವಾಗದ ಅನೇಕ ರೈತರು ದೇಶದಲ್ಲಿದ್ದಾರೆ. ಅವರು ಟ್ರ್ಯಾಕ್ಟರ್ ಗಳನ್ನು ಬಾಡಿಗೆಗೆ ಪಡೆಯುತ್ತಾರೆ ಅಥವಾ ಎತ್ತುಗಳ ಮೂಲಕ ಕೃಷಿ ಮಾಡುತ್ತಾರೆ. ಅದೇ ರೀತಿಯ ರೈತರನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯನ್ನು ತಂದಿದೆ. ಈ ಯೋಜನೆಯಡಿ ರೈತರಿಗೆ ಅರ್ಧ ಬೆಲೆಗೆ ಟ್ರ್ಯಾಕ್ಟರ್ ಸಿಗುತ್ತದೆ.
ರೈತರಿಗೆ ಟ್ರ್ಯಾಕ್ಟರ್ ಖರೀದಿಸಲು ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತದೆ. ಇದರಡಿ ರೈತರು ಅರ್ಧ ಬೆಲೆಗೆ ಕಂಪನಿಯಿಂದ ಟ್ರ್ಯಾಕ್ಟರ್ ಖರೀದಿಸಬಹುದು. ಉಳಿದ ಹಣವನ್ನ ಸರ್ಕಾರ ನೀಡುತ್ತದೆ. ಇದಲ್ಲದೆ, ಅನೇಕ ರಾಜ್ಯ ಸರ್ಕಾರಗಳು ರೈತರಿಗೆ ತಮ್ಮದೇ ಮಟ್ಟದಲ್ಲಿ ಟ್ರ್ಯಾಕ್ಟರ್ʼಗಳ ಮೇಲೆ 20 ರಿಂದ 50% ವರೆಗೆ ಸಬ್ಸಿಡಿ ನೀಡುತ್ತವೆ.
ಸರ್ಕಾರ ಕೇವಲ ಒಂದು ಟ್ರ್ಯಾಕ್ಟರ್ʼಗೆ ಮಾತ್ರ ಸಬ್ಸಿಡಿ ನೀಡುತ್ತಿದೆ. ಈ ಯೋಜನೆಯ ಲಾಭ ಪಡೆಯಬೇಕಾದ್ರೆ ರೈತರು, ಆಧಾರ್ ಕಾರ್ಡ್, ಲ್ಯಾಂಡ್ ಪೇಪರ್, ಬ್ಯಾಂಕ್ ವಿವರ, ಪಾಸ್ ಪೋರ್ಟ್ ಸೈಜ್ ಫೋಟೋ ಹೊಂದಿರಬೇಕು. ಈ ಯೋಜನೆಯಡಿ, ರೈತರು ಹತ್ತಿರದ ಯಾವುದೇ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆನ್ ಲೈನ್ʼನಲ್ಲಿ ಅರ್ಜಿ ಸಲ್ಲಿಸಬಹುದು.
ಮುಂದಿನ ವಾರ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಹೊಸ ಕಂತು ಕೋಟಿ ರೈತರ ಖಾತೆಗೆ ಬರುತ್ತಿದೆ. ಅದಕ್ಕಾಗಿ ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿವೆ. ಪ್ರಾಥಮಿಕ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ರೈತರಿಗೆ 10ನೇ ಕಂತಿನ ಹಣ ರವಾನೆಯಾಗಲಿದೆ.ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಡಿಸೆಂಬರ್ 15, 2021ರೊಳಗೆ ರೈತರ ಖಾತೆಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10ನೇ ಕಂತು ಸೇರಲಿದೆ.