ಕೆ.ಎಸ್.ಡಿ.ಎಂ.ಎಫ್ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಸಮೀವುಲ್ಲಾ ಬೆಳಗೂರು ಆಯ್ಕೆ..!

ಬೆಂಗಳೂರು: ಬೆಂಗಳೂರಿನ ಪ್ರೆಸ್ ಕ್ಲಬ್ ಅವರಣದಲ್ಲಿ ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಫೋರಂ ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ. ಇದರ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತರು, ದಿ post.com ನ ಸಂಸ್ಥಾಪಕರಾದ ಸಮೀವುಲ್ಲಾ ಸರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಮಾತನಾಡಿದ ಅವರು ಡಿಜಿಟಲ್ ಮೀಡಿಯ ಮುಖ್ಯವಾಹಿನಿಯಾಗಿ ಗುರುತಿಸುವ ನಿಟ್ಟಿನಲ್ಲಿ ಹೊಸ ರೀತಿಯ ಸಂಸ್ಥೆ ಪರ್ಯಾಯ ಮಾಧ್ಯಮವನ್ನ ಸಂಘಟಿತ ರೂಪದಲ್ಲಿ ನೋಡುವುದಕ್ಕೆ ಇದು ಪ್ರಮುಖವಾದ ಪ್ರಯತ್ನವಾಗಿದೆ. ಎಲ್ಲಾ ಮಾಧ್ಯಮಗಳಿಗಿಂತ ಡಿಜಿಟಲ್ ಮಾಧ್ಯಮ ಜನಸಾಮಾನ್ಯರಿಗೆ ಹತ್ತಿರವಾಗಿದೆ. ವೃತ್ತಿಪರವಾಗಿ ಕಾರ್ಯನಿರ್ವಹಿಸುವವರನ್ನು ಸಂಘಟಿಸಿ ಈ ಸಂಸ್ಥೆಯ ಅಸ್ತಿತ್ವಕ್ಕೆ ಬಂದಿದೆ ಎಂದು ತಿಳಿಸಿದರು. ಡಿಜಿಟಲ್ ಮಾಧ್ಯಮದಲ್ಲಿ ಇರಬಹುದಾದ ಫೇಕ್ ನ್ಯೂಸ್, ವೈಭವೀಕರಣ, ಅನೇಕ ವಿಷಯಗಳು ಇವು ಇಲ್ಲದೆ ಗುಣಮಟ್ಟ ವೃತ್ತಿಪರ ಸಂಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಒಟ್ಟಾರೆಯಾಗಿ ಕನ್ನಡ ಮಾಧ್ಯಮ, ಡಿಜಿಟಲ್ ಮಾಧ್ಯಮದಲ್ಲಿ ಇದು ಒಂದು ಅಪರೂಪದ ಕ್ಷಣ ಎಂದು ಹೇಳಿದರು.

About The Author