ಕರ್ನಾಟಕ : ಡಿಸೆಂಬರ್ 10 ರಂದು ವಿಧಾನ ಪರಿಷತ್ ನ 25 ಸ್ಥಾನಗಳಿಗೆ 20 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು ಇಂದು ಚುನಾವಣಾ ಫಲಿತಾಂಶ ಬಿಡುಗಡೆಯಾಗಿದೆ. 24 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು 1 ಕ್ಷೇತ್ರದ ಫಲಿತಾಂಶ ಪ್ರಕಟವಾಗಬೇಕಾಗಿದೆ.ಈ ಬಾರಿ ಜೆಡಿಎಸ್ 1 ಕ್ಷೇತ್ರವನ್ನು ಮಾತ್ರ ಗೆದ್ದಿದ್ದು, ತನ್ನ ಕುಟುಂಬದ ಕುಡಿಯನ್ನು ಗೆಲ್ಲಿಸಿ ಕೊಳ್ಳುವುದರಲ್ಲಿ ಮಾತ್ರ ಸಾಧ್ಯವಾಗಿದೆ, ಕಳೆದ ಬಾರಿ ಮೈಸೂರು,ಮಂಡ್ಯ, ಕೋಲಾರ, ತುಮಕೂರು ಕ್ಷೇತ್ರಗಳಲ್ಲಿ ಗೆದ್ದಿತ್ತು ಆದರೆ ಈ ಬಾರಿ ಒಂದು ಕ್ಷೇತ್ರಕ್ಕೆ ಮಾತ್ರ ಗೆಲುವನ್ನು ಸೀಮಿತ ಮಾಡಿಕೊಂಡಿದೆ. ಹಾಗೆಯೇ ಕಾಂಗ್ರೆಸ್ ಈ ಬಾರಿ 11 ಕ್ಷೇತ್ರಗಳಲ್ಲಿ ಗೆದ್ದಿದ್ದು ಬೀದರ್, ವಿಜಯಪುರ- ಬಾಗಲಕೋಟ್, ಕೋಲಾರ- ಚಿಕ್ಕಬಳ್ಳಾಪುರ, ಧಾರವಾಡ, ರಾಯಚೂರು, ಮಂಡ್ಯ, ಬೆಳಗಾವಿ, ತುಮಕೂರು, ಬೆಂಗಳೂರು ಗ್ರಾಮಾಂತರ, ಮೈಸೂರು ನಲ್ಲಿ ಗೆಲ್ಲುವುದರ ಮೂಲಕ ವಿಜಯದ ಪತಾಕೆಯನ್ನು ಆರಿಸಿದೆ. ಇನ್ನು ಬಿಜೆಪಿ 11 ಕ್ಷೇತ್ರಗಳಲ್ಲಿ ಗೆದ್ದಿದ್ದು ಚಿತ್ರದುರ್ಗ, ಬೆಂಗಳೂರು ನಗರ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಬಳ್ಳಾರಿ, ಕಲ್ಬುರ್ಗಿ ಎಲ್ಲಿ ವಿಜಯ ಸಾಧಿಸಿದ್ದು, ಧ್ವಿಸದಸ್ಯ ಕ್ಷೇತ್ರವಾದ ಮೈಸೂರಿನಲ್ಲಿ ಎರಡನೇ ಸ್ಥಾನದ ಗೆಲುವಿಗೆ ಜೆಡಿಎಸ್ ವಿರುದ್ಧ ಸೆಣಸಾಟ ನಡೆಸುತ್ತಿದ್ದು ಫಲಿತಾಂಶ ಇನ್ನು ವಿಳಂಬವಾಗಿದೆ. ಇನ್ನು ಹೈವೋಲ್ಟೇಜ್ ಕ್ಷೇತ್ರ ವಾದಂತಹ ಬೆಳಗಾವಿಯಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಮೊದಲ ಮೊದಲ ಸ್ಥಾನದ ಚುನಾವಣೆ ಎಣಿಕೆಯಲ್ಲಿಯೇ ಜಯಭೇರಿ ಬಾರಿಸಿದ್ದು, ಎರಡನೇ ಸ್ಥಾನಕ್ಕೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯ ನಡುವೆ ಹಣಾಹಣಿ ನಡೆದಿದ್ದು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ 400ಕ್ಕೂ ಅಧಿಕ ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ. ಇನ್ನು ವಿಜಯಪುರದಲ್ಲಿ ಎರಡನೇ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿಯ ನಡುವೆ ಮಧ್ಯೆ ಹಣಾಹಣಿ ನಡೆದಿದ್ದು ಬಿಜೆಪಿ ಗೆಲುವಿನ ನಗೆ ಬೀರಿದೆ. ಇನ್ನು ಕೇವಲ ಮೈಸೂರು- ಚಾಮರಾಜನಗರದ, ಕ್ಷೇತ್ರದ ಫಲಿತಾಂಶ ಮಾತ್ರ ಪ್ರಕಟಣೆ ಆಗಬೇಕಾಗಿದ್ದು , ಬಿಜೆಪಿ ಬಹುಮತವನ್ನು ಪಡೆಯಬೇಕಾದರೆ ಇದನ್ನು ಒಂದನ್ನು ಗೆಲ್ಲಲೇ ಬೇಕಾದಂತಹ ಅವಶ್ಯಕತೆ ಇದೆ.