ಸಿನಿಮಾ : ಕರುನಾಡಿನ ಮನೆ ಮನದಲ್ಲಿ ಅಪ್ಪು ಎಂದೆಂದಿಗೂ ಅಮರ..ಅಪ್ಪು ಅಜರಾಮರ..ಡಾ.ರಾಜ್ ಕುಟುಂಬದ ಅಪರೂಪದ ಮುತ್ತು.. ಇಬ್ಬರು ಅಣ್ಣಂದಿರ ಸ್ವತ್ತು ಪುನೀತ್ ರಾಜ್ ಕುಮಾರ್ ಕರ್ನಾಟಕದ ರತ್ನ…ಅಭಿಮಾನಿಗಳ ಯುವರತ್ನ.. ಅಪ್ಪನ ಹಾದಿಯಲ್ಲಿಯೇ ಸಾಗಿ ಕಷ್ಟದಲ್ಲಿದ್ದವರ ಕಣ್ಣೀರು ಹೊರೆಸಿದ ಅಮೂಲ್ಯ ರತ್ನ ಅಪ್ಪು ಅಂದ್ರೆ ಶಿವಣ್ಣನಿಗೆ ಅಚ್ಚು ಮೆಚ್ಚು.. ತಮ್ಮನಿಗಿಂತ ಹೆಚ್ಚಾಗಿ ಶಿವಣ್ಣ-ಅಪ್ಪು ಗೆಳೆಯರಂತಿದ್ದವರು. ರಾಮ-ಲಕ್ಷ್ಮಣರಂತೆ ಬಾಳಿ ಬದುಕುತ್ತಿದ್ದವರು. ಇಂದು ಮುತ್ತುರಾಜ ಹೆತ್ತಮುತ್ತು ಎಲ್ಲರನ್ನು ಅಗಲಿ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಹಾಗಂತ ಅಪ್ಪು ನಮ್ಮೊಂದಿಗೆ ಇಲ್ಲ ಅಂತಲ್ಲ. ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತ. ಕರುನಾಡಿನ ಮನೆ ಮನೆಯಲ್ಲಿ ಆರಾಧಿಸ್ತಿರುವ ಅಪ್ಪುಗಾಗಿ.. ಪ್ರೀತಿಯ ಪುನೀತನಿಗಾಗಿ ಅಣ್ಣ ಶಿವಣ್ಣ ತಮ್ಮ ಭಜರಂಗಿ-2 ಸಿನಿಮಾವನ್ನು ಅರ್ಪಿಸಿದ್ದಾರೆ. ಅಪ್ಪುಗೆ ಶಿವಣ್ಣ ತಮ್ಮ ಎಂಬ ಕಾರಣಕ್ಕಾಗಿ ಈ ಭಜರಂಗಿ-2 ಸಿನಿಮಾ ಅರ್ಪಿಸಿಲ್ಲ. ಅದರ ಹಿಂದೆ ಬಲವಾದ ಕಾರಣವೂ ಇದೆ. ಅದನ್ನು ಕ್ಲಿಯರ್ ಆಗಿ ವಿವರಿಸುತ್ತೇವೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ್ ಮೂಡಿ ಬಂದ ಸಿನಿಮಾ ಭಜರಂಗಿ-2. ಒಂದಷ್ಟು ಸವಾಲುಗಳನ್ನು ಮೆಟ್ಟಿ ಭಜರಂಗಿ-2 ಸಿನಿಮಾ ತಯಾರಾಗಿತ್ತು. ನಿರ್ಮಾಪಕ ಜಯಣ್ಣ-ಭೋಗಣ್ಣ ಭಜರಂಗಿ-2 ಸಿನಿಮಾವನ್ನು ಅದ್ಧೂರಿಯಾಗಿ ತಯಾರಿಸಿದ್ದರು. ಬೆಳ್ಳಿತೆರೆಯ ಮೇಲೆ ರಾರಾಜಿಸಿದ್ದ ಭಜರಂಗಿ-2 ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗ್ತಿದೆ. ಇದೇ 23 ರಂದು ಜೀ5 ಆ್ಯಪ್ ನಲ್ಲಿ ಭಜರೇ ಭಜರಂಗಿ-2 ಅಬ್ಬರಿಸ್ತಿದೆ. ಒಟಿಟಿಯಲ್ಲಿ ಬಿಡುಗಡೆಯಾಗ್ತಿರುವ ಭಜರಂಗಿ-2 ಸಿನಿಮಾವನ್ನು ಶಿವಣ್ಣ ಅಪ್ಪುಗೆ ಅರ್ಪಿಸಿದ್ದಾರೆ. ಯಾಕಂದ್ರೆ ಅಪ್ಪು ಭಜರಂಗಿ-2 ಸಿನಿಮಾವನ್ನು ಬಹಳ ಇಷ್ಟಪಟ್ಟಿದ್ದರು. ತಮ್ಮ ಸಿನಿಮಾವೆಂಬಂತೆ ಪ್ರೀತಿಸಿದ್ದರು. ಅಪ್ಪು ಎಡಿಟಿಂಗ್ ರೂಮ್ ನಲ್ಲಿ ಭಜರಂಗಿ-2 ಸಿನಿಮಾ ಎಡಿಟ್ ಆಗಿತ್ತು. ಬಹಳಷ್ಟು ಸರಿ ಸಿನಿಮಾ ನೋಡಿ ಅಪ್ಪು ಮೆಚ್ಚಿಕೊಂಡಿದ್ದರು. ತುಂಬಾ ಚೆನ್ನಾಗಿ ಬಂದಿದೆ ಅಂತಾ ಹೊಗಳಿದ್ದರು. ಬೇಸರದ ವಿಷ್ಯ ಅಂದ್ರೆ ಅಪ್ಪು ಕೊನೆಯುಸಿರೆಳೆಯುವ ದಿನ ಭಜರಂಗಿ-2 ರಿಲೀಸ್ ಗೆ ವಿಷ್ ಮಾಡಿದ್ದರು. ಅಲ್ಲದೇ ಸಿನಿಮಾ ರಿಲೀಸ್ ಬಳಿಕ ಡಿಸ್ಟ್ರಿಬ್ಯೂಟರ್ ಬಳಿ ಮಾಹಿತಿ ಪಡೆದಿದ್ದರು.
ಅಪ್ಪು ಭಜರಂಗಿ-2 ಸಿನಿಮಾದಲ್ಲಿದ್ದಾರಾ? ಖಂಡಿತ ಹೌದು. ಭಜರಂಗಿ-2 ಸಿನಿಮಾದ ಕೆಲ ದೃಶ್ಯಗಳು ಅಂದ್ರೆ ಶಿವಣ್ಣ ನಟಿಸಿರುವ ಸೀನ್ಸ್ ಅಪ್ಪುಗೆ ಸಂಬಂಧಪಡ್ತಾವೆ. ಅಪ್ಪುಗೆ ಹತ್ತಿರವಾಗುವ ಸನ್ನಿವೇಶಗಳಿವೆ. ಅಪ್ಪು ಅಂದ್ರೆ ಏನು? ಅಪ್ಪು ಬಗ್ಗೆ ಗೊತ್ತಿರದ ಕೆಲ ಸಂಗತಿ ಭಜರಂಗಿ-2 ಸಿನಿಮಾದಿಂದ ತಿಳಿದುಕೊಳ್ಳಬಹುದು. ಹಾಗಿದ್ರೆ ಮತ್ಯಾಕೆ ತಡ ಜೀ5 ಆ್ಯಪ್ ಡೌನ್ ಲೋಡ್ ಮಾಡಿ ಡಿಸೆಂಬರ್ 23ಕ್ಕೆ ಭಜರಂಗಿ-2 ಕಣ್ತುಂಬಿಕೊಳ್ಳಿ.