ಡಾ.ವಿಷ್ಣುವರ್ಧನ್ ಅವರ ನೆನಪಿನಲ್ಲಿ 2022 ರ ಕ್ಯಾಲೆಂಡರ್ ಅನ್ನು ಡಾ.ವಿಷ್ಣು ಸೇನಾ ಸಮಿತಿಯು ಹೊರತಂದಿದೆ. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಕೋಟಿಗೊಬ್ಬ ಹೆಸರಿನಲ್ಲಿ ಕ್ಯಾಲೆಂಡರ್ ಅನ್ನು ಹೊರತರಲಾಗುತ್ತಿದೆ. ಸಾಹಸಸಿಂಹ ಎಂಬ ಬಿರುದು ವಿಷ್ಣು ಅವರ ಹೆಸರಷ್ಟೇ ಕರ್ನಾಟಕದಲ್ಲಿ ಪ್ರಸಿದ್ಧಿ ಹೊಂದಿದೆ. ಆ ಹಿನ್ನಲೆಯಲ್ಲಿಯೇ ಈ ಕ್ಯಾಲೆಂಡರ್ ಅನ್ನು ರೂಪಿಸಲಾಗಿದೆ. ಈ ಸಲ ಸಿಂಹರೂಪಿ ಪರಿಕಲ್ಪನೆ ಅಡಿಯಲ್ಲಿ ಮೂರು ಸಿಂಹಗಳ ನಡುವೆ ಡಾ.ವಿಷ್ಣು ಅವರು ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿಪುಟದಲ್ಲೂ ಡಾ.ವಿಷ್ಣು ಅವರ ವಿಶೇಷ ಚಿತ್ರಗಳನ್ನು ಬಳಸಲಾಗಿದೆ.
ಕ್ಯಾಲೆಂಡರ್ ವಿನ್ಯಾಸ ಮತ್ತು ಮುದ್ರಣ ಸೇರಿ ರೂ. 80 ಖರ್ಚಾಗತ್ತದೆ. ಆದರೆ ಪ್ರತಿ ಅಭಿಮಾನಿ ಮನೆಯಲ್ಲಿಯೂ ಈ ಕ್ಯಾಲೆಂಡರ್ ಇರಬೇಕೆಂಬ ಕಾರಣಕ್ಕೆ ರೂ.50 ಕ್ಕೆ ಎಲ್ಲಾ ಕಡೆ ಮಾರಾಟಕ್ಕೆ ನೀಡಲಾಗುತ್ತಿದೆ. ಉಳಿದ 30 ರೂಪಾಯಿ ವೆಚ್ಚವನ್ನು ವೀರಕಪುತ್ರ ಶ್ರೀನಿವಾಸ ಮತ್ತು ಅವರ ಗೆಳೆಯರು ಭರಿಸುತ್ತಿದ್ದಾರೆ.
ಕ್ಯಾಲೆಂಡರ್ ಬೇಕಾದರೆ 99722 19267 ಗೆ ಸಂಪರ್ಕಿಸಬಹುದು. ಡಾ.ವಿಷ್ಣು ಸೇನಾ ಸಮಿತಿ. ವೀರಕಪುತ್ರ ಶ್ರೀನಿವಾಸ