Saturday, September 21, 2024

Latest Posts

Chikkaballapurದಲ್ಲಿ ಬೆಳಗ್ಗೆ ಭೂಕಂಪನ..!   

- Advertisement -

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ (Earthquake) ಭೂಕಂಪನವಾಗಿದೆ. ಭೂಕಂಪನದಿಂದ ಅಲ್ಲಿನ ಜನರು ಭಯಭೀತಿ ಗೊಂಡಿದ್ದು ಮನೆಯ ಹೊರಗಡೆ ಬಂದಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಶೆಟ್ಟಿಗೆರೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭೂಮಿ ಕಂಪಿಸುವ ರೀತಿಯಲ್ಲಿ ಅಲ್ಲಿನ ಜನರಿಗೆ ಅನುಭವ ಉಂಟಾಗಿದೆ.                            

ಕಳೆದ ಡಿಸೆಂಬರಿ(December)ನಲ್ಲಿ ಚಿಕ್ಕಬಳ್ಳಾಪುರದಲ್ಲಿ ಮೂರು ಬಾರಿ ಭೂಕಂಪನ ಉಂಟಾಗಿತ್ತು. ಆ ವೇಳೆ ಕೆಲವು ಮನೆಗಳು ಬಿದ್ದು ಹೋಗಿದ್ದವು, ಕೆಲವು ಮನೆಯ ಗೋಡೆಗಳು ಕುಸಿದು ಬಿದ್ದವು. ಹಾಗಾಗಿ ಕೆಲ  ಬಡವರ ಸೂರು ಗಳು ಕಳೆದು ಕೊಳ್ಳುವ ಹಾಗೆ ಆಯಿತು. ಅದೇ ರೀತಿ ಇಂದು ಬೆಳಗ್ಗೆ  3:15 ರಿಂದ 3:25 ರ ವೇಳೆ  ಭೂಮಿ ಕಂಪಿಸಿದೆ. ಭೂಕಂಪನದ ತೀವ್ರತೆ 2.6 ರಷ್ಟು ಇದ್ದು, ಸುಮಾರು 7 ರಿಂದ 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ಭೂಕಂಪನ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದು.  ಈ ಭೂಕಂಪನ ಯಾವುದೇ ರೀತಿಯಲ್ಲಿ ಅಪಾಯಕಾರಿ ಅಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಜನರು ಯಾವುದೇ ರೀತಿಯಲ್ಲಿ ಭಯಭೀತರಾಗುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest Posts

Don't Miss