www.karnatakatv.net:ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಕನ್ನಡ ಚಿತ್ರರಗಕ್ಕೆ ಪಾದಾರ್ಪಣೆ ಮಾಡಿದ್ದ ಶುಭಾ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ, ಮುಖ್ಯ ಕಲಾವಿದೆಯಾಗಿ ಅಭಿನಯಿಸಿದ್ದಾರೆ. ಬಿಗಬಾಸ್ ನಲ್ಲೂ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಶುಭಾ ಪೂಂಜಾ ತಮ್ಮ ನೈಜ ನಡವಳಿಕೆ ಇಂದ ಕರ್ನಾಟಕದ ಜನರ ಮನ ಗೆದ್ದಿದ್ದರು. ಹಲವು ಬಾರಿ ತಾನು ಮಧುವೆಯಾಗುವಬಗ್ಗೆ ಮಾತನಾಡಿದ್ದರು.
ಇಂದು ಉಡುಪಿಯ ಶಿರ್ವಾದಲ್ಲಿ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ತಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸುಮಂತ್ ಮಹಾಬಲ ಅವರ ಜೊತೆ ಸರಳ ವಿವಾಹವಾಗಿದ್ದರೇ ಮತ್ತು ಮದುವೆಯಾಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು “ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ” ಎಂದು ಬರೆದುಕೊಂಡಿದ್ದಾರೆ.




