ಗುಜರಾತ್: ಸೂರತ್(Surat) ನಲ್ಲಿ ಅನಿಲ ಸೋರಿಕೆಯಿಂದ ಆರು ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಇಂದು ಮುಂಜಾನೆ ಸೂರತ್ನ ಸಚಿನ್ ಜಿಐಡಿಸಿ ಪ್ರದೇಶದಲ್ಲಿನ ಕಂಪನಿಯೊಂದರಲ್ಲಿ ಅನಿಲ ಸೋರಿಕೆಯಿಂದಾಗಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 20 ಜನರನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಉಸ್ತುವಾರಿ ಸೂಪರಿಂಟೆಂಡೆಂಟ್ ಡಾ ಓಂಕಾರ್ ಚೌಧರಿ (Dr Omkar Chaudhry)ಎಎನ್ಐಗೆ ತಿಳಿಸಿದ್ದಾರೆ.
ಗುಜರಾತ್ ರಾಜ್ಯದ ಸೂರತ್ ನಗರದ ಕೈಗಾರಿಕಾ ವಲಯ(Industrial sector) ದಲ್ಲಿ ಅನಿಲ ಸೋರಿಕೆಯಿಂದ ಅನಿಲ ಉಸಿರಾಡಿದ ನಂತರ ಇನ್ನೂ 25 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ(police officer) ಮಹೇಶ್ ಪಟೇಲ್ (Mahesh Patel) ತಿಳಿಸಿದ್ದಾರೆ. ನಿರ್ಲಕ್ಷ್ಯ ಮತ್ತು ಸುರಕ್ಷತಾ ಮಾನದಂಡಗಳ ಕೊರತೆಯು ಸಾಮಾನ್ಯವಾಗಿ ಭಾರತದಲ್ಲಿ ಇಂತಹ ಅಪಘಾತಗಳಿಗೆ ಕಾರಣವಾಗಿದೆ.
2020 ರಲ್ಲಿ, ಆಂಧ್ರಪ್ರದೇಶ ರಾಜ್ಯದ ಬಂದರು ನಗರವಾದ ವಿಶಾಖಪಟ್ಟಣಂ(Visakhapatnam)ನಲ್ಲಿ ದಕ್ಷಿಣ ಕೊರಿಯಾದ ಒಡೆತನದ ರಾಸಾಯನಿಕ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿ 12 ಜನರು ಸಾವನ್ನಪ್ಪಿದರು ಮತ್ತು ನೂರಾರು ಜನರು ಅಸ್ವಸ್ಥರಾಗಿದ್ದರು. ಭಾರತದ ಉನ್ನತ ಪರಿಸರ ನ್ಯಾಯಾಲಯವು ನೇಮಿಸಿದ ಸಮಿತಿಯು ಕಾರ್ಖಾನೆಯಲ್ಲಿ ಅನಿಲ ಸೋರಿಕೆಗೆ “ಒಟ್ಟು ಮಾನವ ವೈಫಲ್ಯ” ಮತ್ತು ಮೂಲಭೂತ ಸುರಕ್ಷತಾ ಮಾನದಂಡಗಳ ಕೊರತೆಯನ್ನು ಸ್ಪಷ್ಟಪಡಿಸಿದ್ದಾರೆ.