ದೆಹಲಿ : ದೆಹಲಿಯ ತಿಹಾರ್ ಜೈಲಿ(Tihar Jail)ನಲ್ಲಿ ಕೈದಿಯೊಬ್ಬನು ಮೊಬೈಲ್ ಫೋನ್(Mobile phones) ನುಂಗಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ಸಿಬ್ಬಂದಿ ಅನುಮಾನದಿಂದ ಕೈದಿಗಳನ್ನು ಶೋಧಿಸಿದಾಗ ಜೈಲ್ ನಂಬರ್ ಒಂದರಲ್ಲಿ ಇದ್ದ ಕೈದಿಯೊಬ್ಬನು ಮೊಬೈಲ್ ನುಂಗಿದ್ದು, ಕೂಡಲೇ ಆತನನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆ(Deen Dayal Upadhyay Hospital)ಗೆ ಸೇರಿಸಲಾಗಿದೆ. ಬಿಗಿಭದ್ರತೆ ಇರುವ ತಿಹಾರ್ ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್ ಫೋನ್ ಗಳಂತಹ ವಸ್ತುಗಳನ್ನು ಸಿಬ್ಬಂದಿಗಳೇ ಪೂರೈಸುತ್ತಿದ್ದಾರೆ ಎಂಬ ಆರೋಪ ಕಂಡುಬಂದಿದ್ದು, ಇಂತಹ ಕೆಲಸದಲ್ಲಿ ತೊಡಗಿರುವ ಅಂತಹ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದದೆ. ಮೊಬೈಲ್ ನುಂಗಿರುವ ಪ್ರಕರಣ ಬುಧವಾರ ನಡೆದಿದ್ದು ಇಲ್ಲಿಯವರೆಗೂ ಆ ಮೊಬೈಲ್ ಹೊಟ್ಟೆಯಲ್ಲಿಯೇ ಇದೆ. ಆದರೆ ಕೈದಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ. ಅದನ್ನು ಹೊರತೆಗೆಯಲು ಆಪರೇಷನ್ ಮಾಡಲಾಗುತ್ತದೆ ಎಂದು ತಿಳಿದುಬಂದಿದ್ದು. ಶೀಘ್ರದಲ್ಲಿಯೇ ಕಾರಾಗೃಹದ ಆವರಣದಲ್ಲಿ ಎಕ್ಸರೇ ಆಧಾರದ ಮಾನವ ದೇಹದ ತಪಾಸಣೆ ಮಾಡುವ ಯಂತ್ರವನ್ನು ಅಳವಡಿಸಲಾಗುವುದು ಎಂದು ಗೋಯೆಲ್(Goel) ಹೇಳಿದ್ದಾರೆ.




