Sunday, August 10, 2025

Latest Posts

Uttara pradesh : ಬಿಜೆಪಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ..!

- Advertisement -

ಉತ್ತರ ಪ್ರದೇಶ : ಲಕ್ನೋ(Lucknow) ದ ಬಿಜೆಪಿಯ ಸಚಿವ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya)ರಾಜಿನಾಮೆ ನೀಡಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ನೇತೃತ್ವದಲ್ಲಿನ ಬಿಜೆಪಿ ಪಕ್ಷದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ವಿಧಾನಸಭೆ ಚುನಾವಣೆಗೂ ರಾಜೀನಾಮೆ ನೀಡಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಇವರ ಜೊತೆ ಇನ್ನೊಬ್ಬ ಸಚಿವ ಹಾಗೂ 4 ಶಾಸಕರು ಸೇರಿ ರಾಜಿನಾಮೆ ಕೊಟ್ಟು ಸಮಾಜವಾದಿ ಪಕ್ಷ(Socialist Party) ಸೇರುತ್ತಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಇನ್ನು ರಾಜೀನಾಮೆ ರಾಜ್ಯಪಾಲರ ಕೈಸೇರಿದೆ. ಇನ್ನು ರಾಜೀನಾಮೆಗೆ ಬಗ್ಗೆ ಮಾತನಾಡಿರುವ ಸ್ವಾಮಿ ಪ್ರಸಾದ ಮೌರ್ಯ ಪಕ್ಷದಲ್ಲಿ ದಲಿತರು ಮತ್ತು ಯುವ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ, ಪಕ್ಷದೊಳಗೆ ಎರಡು ನನಗೆ ಮುಜುಗರ ಆಗುತ್ತಿದೆ. ಅದಕ್ಕೆ ರಾಜೀನಾಮೆ ನೀಡಿದ್ದು ಇನ್ನು 10 ಶಾಸಕರು ಪಕ್ಷವನ್ನು ತೊರೆಯಲಿದ್ದಾರೆ ಎಂದು ಹೇಳಿದ್ದಾರೆ.

ಹಾಗೆಯೇ ಬಿಜೆಪಿ ಶಾಸಕ ರೋಷನ್ ಲಾಲ್ ವರ್ಮಾ ತಾನು ಕೂಡ ರಾಜೀನಾಮೆ ಕೊಡುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್(Former Chief Minister Akhilesh Yadav)ಸಚಿವ ಸ್ವಾಮಿ ಪ್ರಸಾದ್ ಮೌರ್ಯ ರಿಗೆ ಆದರದ ಸ್ವಾಗತವನ್ನು ಸಹ ಕೋರಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ರವರು ದುಡುಕಿನ ನಿರ್ಧಾರ ಮಾಡಬಾರದು. ಎಂದಿಗೂ ದುಡುಕಿನ ನಿರ್ಧಾರ ಸರಿಯಾಗಿರುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಪಂಚ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಖಂಡ್, ಪಂಜಾಬ್ ಮಣಿಪುರ್,ಗೋವಾ ರಾಜ್ಯಗಳಿಗೆ ಫೆಬ್ರವರಿ 10 ರಿಂದ ವಿಧಾನಸಭಾ ಚುನಾವಣೆ ನಡೆಯಲಿದ್ದು ಮಾರ್ಚ್ 3ರರ ವರೆಗೆ 7 ಹಂತಗಳಲ್ಲಿ ಚುನಾವಣೆ ನಡೆದು. ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ. ಈ ವೇಳೆ ಬಿಜೆಪಿಯ ಸಚಿವ ಸ್ವಾಮಿ ಪ್ರಸಾದ ಮೌರ್ಯ ರಾಜೀನಾಮೆ ನೀಡಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

- Advertisement -

Latest Posts

Don't Miss