ರಾಯಚೂರು : ಇಂದು ರಾಯಚೂರಿ(Raichur)ನ ಜಿಲ್ಲಾ ಪಂಚಾಯತ್(District Panchayat)ಸಭಾಂಗಣದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮಗಾರರೊಂದಿಗೆ ಮಾತನಾಡುವ ವೇಳೆ ಸಚಿವ ಹಾಲಪ್ಪ ಆಚಾರ್(Minister Halappa Achar) ಗೆ ಪ್ರಶ್ನೆ ಕೇಳಿದ್ದಕ್ಕೆ, ಶಾಸಕ ವೆಂಕಟಪ್ಪ ನಾಯಕ(MLA Venkatappa is the leader)ಪತ್ರಕರ್ತರ ಮೇಲೆ ಎಗರಾಡಿದ್ದಾರೆ. ಇನ್ನು ಮಾನ್ವಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ(Women’s and Children’s Hospital) ಬಗ್ಗೆ ಪ್ರಶ್ನೆ ಮಾಡಿದಾಗ ಕೈಸನ್ನೆ ಮಾಡಿ ಅಸಂಬದ್ಧ ಪದ ಬಳಕೆ ಮಾಡಿದ್ದಾರೆ. ಇನ್ನು ಈ ಆಸ್ಪತ್ರೆಯಲ್ಲಿ ಸರಿಯಾದ ವೈದ್ಯರು ಹಾಗೂ ಸಿಬ್ಬಂದಿಯಿಲ್ಲ. ಸರಿಯಾದ ಸಲಕರಣೆಗಳು ಇಲ್ಲದೆ, ಇಂದು ಉದ್ಘಾಟನೆ ಮಾಡಲು ಮುಂದಾಗಿದ್ದರು. ಇನ್ನು ಕಟ್ಟಡ ಪೂರ್ಣವಾಗಿ ಮೂರುವರೆ ವರ್ಷಗಳ ಬಳಿಕ ಉದ್ಘಾಟನೆ ಯಾಗುತ್ತಿರುವ ಆಸ್ಪತ್ರೆ ಇದಾಗಿದೆ. ಆಸ್ಪತ್ರೆಗೆ ಸೌಲಭ್ಯಗಳು ಯಾವಾಗ ಕೊಡುತ್ತೀರಿ ಅಂತ ಪ್ರಶ್ನೆ ಕೇಳಿದ್ದಕ್ಕೆ, ಸಚಿವ ಹಾಲಪ್ಪ ಆಚಾರ್ ಎದುರಲ್ಲೇ ಅಶ್ಲೀಲ ಪದ ಬಳಕೆ ಮಾಡಿದ್ದಾರೆ.