ತುಮಕೂರು: ಡಿಸಿಎಂ ಜಿ.ಪರಮೇಶ್ವರ ಹೋಗೋ ದಾರಿಯಲ್ಲಿ ಬಿಜೆಪಿ ಬಾವುಟ ಕಾಣಬಾರದಂತೆ. ಹಾಗಾಗಿ ಡಿಸಿಎಂ ಪ್ರಯಾಣ ಮಾಡ್ತಾ ಇದ್ದ ಮಾರ್ಗ ಮಧ್ಯದ ಅಂಗಡಿ ಮುಂದೆ ನೇತುಹಾಕಲಾಗಿದ್ದ ಬಿಜೆಪಿ ಬಾವುಟ ತೆರವುಗೊಳಿಸುವಂತೆ ಗ್ರಾಮ ಪಂಚಾಯತಿಯಿಂದ ನೋಟಿಸ್ ಬಂದಿದೆ.
ನಿನ್ನೆ ಡಿಸಿಎಂ ಕ್ಷೇತ್ರ ಕೊರಟಗೆರೆಯ ತೋವಿನಕೆರೆಯಲ್ಲಿ ಜನಸಂಪಕರ್ಕ ಸಭೆ ಇತ್ತು. ಡಿಸಿಎಂ ಕೆಸ್ತೂರು ಮಾರ್ಗ ವಾಗಿ ತೋವಿನಕೆರೆಗೆ ತಲುಪುವವರಿದ್ರು. ಕೆಸ್ತೂರಿನಲ್ಲಿ ಪ್ರಧಾನಮಂತ್ರಿ ಜನೌಷಧಿ ಅಂಗಡಿ ಇಟ್ಟುಕೊಂಡಿದ್ದ ರವಿ ಎಂಬುವವರು ಅಂಗಡಿ ಮುಂದೆ ಬಿಜೆಪಿ ಬಾವುಟ ನೇತುಹಾಕಿದ್ರು. ಇದನ್ನ ನೋಡಿದ ಕೆಸ್ತೂರು ಗ್ರಾಮ ಪಂಚಾಯತಿ ಪಿಡಿಒ ಬಾವುಟ ತೆರವುಗೊಳಿಸುವಂತೆ ವಾಟರ್ ಮ್ಯಾನ್ ಮೂಲಕ ಪತ್ರ ಕಳುಹಿಸಿದ್ದಾರೆ. ಅನುಮತಿಯಿಲ್ಲದೆ ಬಾವುಟ ಕಟ್ಟಿದ್ದೀರಿ, ಇದನ್ನು ತೆರವುಗೊಳಿಸದೇ ಇದ್ರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಆದ್ರೆ ಬಿಜೆಪಿ ನಿಷ್ಠಾವಂತ ಕಾರ್ಯಕರ್ತನಾದ ರವಿ ಪಂಚಾಯತಿಯ ಎಚ್ಚರಿಕೆಗೆ ಬೆದರಲಿಲ್ಲ. ಬಾವುಟ ತೆಗೆಯಲು ಸಾಧ್ಯವಿಲ್ಲ ಎಂದಿದ್ದಕ್ಕೆ ಗ್ರಾಮ ಪಂಚಾಯತಿ ಕಚೇರಿಗೆ ಕರೆದುಕೊಂಡು ಪಿಡಿಒ ಮೌಖಿಕವಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಡಿಸಿಎಂ ಬಂದು ಹೋಗುವಾಗಾದರೂ ತೆರವುಗೊಳಿಸಿ ಬಳಿಕ ಹಾಕಿಕೊಳ್ಳಿ ಅಂತ ಸೂಚಿಸಿದ್ರಂತೆ. ಅದಕೂ ಬಗ್ಗದಿದ್ದಾಗ ಸ್ಥಳದಲ್ಲಿಯೇ ನೋಟಿಸ್ ಕೊಟ್ಟಿದ್ದಾರೆ. ತೆರವುಗೊಳಿಸದೇ ಇದ್ರೆ ಕ್ರಮ ತೆಗೆದುಕೊಳ್ಳುವುದಾಗಿ ಮತ್ತೆ ಎಚ್ಚರಿಕೆ ಕೊಟ್ಟಿದಾರಂತೆ.
ದೇವೇಗೌಡರ ಮಾತಿಗೆ ಸಿದ್ದರಾಮಯ್ಯ ಏನಂದ್ರು ಗೊತ್ತಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ