Monday, December 23, 2024

Latest Posts

West Bengal : Train ಹಳಿತಪ್ಪಿ 12 ಬೋಗಿಗಳು ನೆಲಕ್ಕೆ ಉರುಳಿದ್ದು , 9 ಜನ ಸಾವು..!

- Advertisement -

ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳ(West Bengal)ದಲ್ಲಿ ನಿನ್ನೆ ಸಂಜೆ 5 ಗಂಟೆಯಲ್ಲಿ ಬಿಕಾನೆರ್- ಗುವಾಹಾಟಿ(Bikaner-Guwahati) ಎಕ್ಸ್ ಪ್ರೆಸ್ ರೈಲು (Express Train)ಹಳಿತಪ್ಪಿದ  ಕಾರಣ 12 ಬೋಗಿಗಳು  ನೆಲಕ್ಕೆ ಉರುಳಿವೆ. NDRF ಸಿಬ್ಬಂದಿಯ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯ ನಂತರ ಗುವಾಹಾಟಿ – ಬಿಕಾನೆರ್ ಎಕ್ಸ್‌ಪ್ರೆಸ್‌ ಹಳಿತಪ್ಪಿದವು. ಪಶ್ಚಿಮ ಬಂಗಾಳದ ಜಲಪೈಗುರಿ(Jalpaiguri ) ಜಿಲ್ಲೆಯಲ್ಲಿ ಬಿಕಾನೆರ್-ಗುವಾಹಾಟಿ ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿದೆ, ಇತರ 36 ಜನರ ಸ್ಥಿತಿ ಗಂಭೀರವಾಗಿದೆ.

ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಈಶಾನ್ಯ ಫ್ರಾಂಟಿಯರ್ ರೈಲ್ವೇ (ಎನ್‌ಎಫ್‌ಆರ್) ಅಲಿಪುರ್ದೌರ್(Alipurduar) ವಿಭಾಗದ ಡೊಮೊಹಾನಿ(Domohani ) ಬಳಿ ಹನ್ನೆರಡು ಬೋಗಿಗಳ ಅಸ್ಸಾಂ9Assam)ಗೆ ಹೋಗುವ ರೈಲು ಹಳಿತಪ್ಪಿತು ಮತ್ತು ಕೆಲವು ಪಲ್ಟಿಯಾಗಿದೆ ಎಂದು ರೈಲ್ವೆ ವಕ್ತಾರರು ಗುವಾಹಾಟಿಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸಚಿವ ಜಾನ್ ಬಾರ್ಲಾ(Union Minister John Barla)ಅವರು ರಕ್ಷಣಾ ಕಾರ್ಯಾಚರಣೆಯು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಾಗಿದೆ ಎಂದು ಹೇಳಿದರು. “ಪ್ರಯಾಣಿಕರನ್ನು ವಿಶೇಷ ರೈಲಿನ ಮೂಲಕ ಗುವಾಹಾಟಿಗೆ ಕಳುಹಿಸಲಾಗಿದೆ” ಎಂದು ಜಾನ್ ಬರ್ಲಾ ಅವರು ತಿಳಿಸಿದ್ದಾರೆ. ರೈಲ್ವೆ ಸುರಕ್ಷತಾ ಆಯುಕ್ತರು ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ನವದೆಹಲಿಯಲ್ಲಿ ತಿಳಿಸಿದ್ದಾರೆ. ಗುವಾಹಾಟಿ ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ ಎಂದು ಎನ್ಎಫ್ಆರ್(NRF) ಹೇಳಿಕೆಯಲ್ಲಿ ತಿಳಿಸಿದೆ. ಹಳಿ ತಪ್ಪಿದ ಸಮಯದಲ್ಲಿ ರೈಲಿನಲ್ಲಿ 1,053 ಪ್ರಯಾಣಿಕರಿದ್ದರು, ಸಿಕ್ಕಿಬಿದ್ದವರಿಗೆ ಕುಡಿಯುವ ನೀರು ಮತ್ತು ತಿಂಡಿಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಇಂದು ಮುಂಜಾನೆ ಪ್ರಧಾನಿ ಮೋದಿ(PM Modi) ಕೂಡ ಅಧಿಕಾರಿಗಳ ಬಳಿ ವಿಚಾರಿಸಿ ಪರಿಸ್ಥಿತಿಯ ಅವಲೋಕನ ನಡೆಸಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಜನರ ಕುಟುಂಬ ಸದಸ್ಯರಿಗೆ ಭಾರತೀಯ ರೈಲ್ವೇ 5 ಲಕ್ಷ ರೂಪಾಯಿ ,ಗಂಭೀರವಾಗಿ ಗಾಯಗೊಂಡ 1 ಲಕ್ಷ, ಸಣ್ಣಪುಟ್ಟ ಗಾಯಗೊಂಡವರಿಗೆ 25 ಸಾವಿರ ಪರಿಹಾರ ನೀಡುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ ಘೋಷಿಸಿದೆ.

- Advertisement -

Latest Posts

Don't Miss