Saturday, June 21, 2025

Latest Posts

ಇಂಥಾ ಮದುವೆ ಎಲ್ಲೂ ನಡೆದಿರ್ಲಿಕ್ಕಿಲ್ಲ.. ಅಂಥಾದ್ದೇನಿದೆ ಸ್ಪೆಶಲ್ ಅಂತೀರಾ..? ನೀವೇ ಓದಿ..

- Advertisement -

ಸಾಮಾನ್ಯವಾಗಿ ಮದುವೆ ಅಂದ್ರೆ ಸಂಬಂಧಿಕರು, ಪರಿಚಯಸ್ಥರು, ಗೆಳೆಯರನ್ನೆಲ್ಲ ಕರೆದು, ಛತ್ರದಲ್ಲಿ ನಡೆಯುವ ಕಾರ್ಯಕ್ರಮ. ಕೆಲವರು ಮನೆಯಲ್ಲೂ ಮದುವೆ ಮಾಡ್ತಾರೆ. ಆದ್ರೆ ಇಂದು ನಾವು ಹೇಳುತ್ತಿರುವ ಮದುವೆ ಥರ ಯಾರ ಮದುವೆಯೂ ನಡೆದಿರ್ಲಿಕ್ಕಿಲ್ಲಾ ಅನ್ಸತ್ತೆ. ಯಾಕಂದ್ರೆ ಈ ಮದುವೆಯಲ್ಲಿ ಸಂಬಂಧಿಕರು, ಪರಿಚಯಸ್ಥರೆಲ್ಲ ಗೂಗಲ್ ಮೂಲಕ ಮೀಟ್ ಆಗ್ತಿದ್ದಾರೆ. ಊಟ ಜೊಮೆಟೋ ಮೂಲಕ ಎಲ್ಲರ ಮನೆ ತಲುಪಲಿದೆ.

ವಿಚಿತ್ರ ಅನ್ನಿಸಿದರೂ ಇದು ನಿಜ. ಕೋವಿಡ್ ರೂಲ್ಸ್ ಬ್ರೇಕ್ ಮಾಡದೇನೆ, 450ಕ್ಕೂ ಹೆಚ್ಚು ಮಂದಿಯ ಸಮ್ಮುಖದಲ್ಲಿ ತಮ್ಮ ಮದುವೆ ಮಾಡಿಕೊಳ್ಳಲು ಬಂಗಾಲ ಮೂಲಕ ವಧು ವರರು ನಿರ್ಧರಿಸಿದ್ದಾರೆ. ಅಲ್ಲಿನ ಸರ್ಕಾರ ಹೇಳಿರುವಂತೆ, ಮದುವೆ ಛತ್ರದಲ್ಲಿ ಅಥವಾ ಮನೆಯಲ್ಲಿ ನಡೆದರೆ, 200ಕ್ಕೂ ಮೀರಿ ಜನ ಬರುವ ಹಾಗಿಲ್ಲ ಅಂತಾ ಹೇಳಿದ್ದಾರೆ. ಆದ್ರೆ ಈ ಮಧುಮಕ್ಕಳಿಗೆ, ಯಾರನ್ನೂ ಮಿಸ್ ಮಾಡದೇ ಮದುವೆಗೆ ಕರಿಯಬೇಕಾಗಿದೆ. ಹಾಗಾಗಿ ಇವರಿಬ್ಬರು, ಈ ಐಡಿಯಾವನ್ನ ಮಾಡಿದ್ದಾರೆ.

ಇದೇ ಜನವರಿ 24ರಂದು ನಡೆಯಬೇಕಾಗಿರುವ ಮದುವೆಗೆ, 450ಕ್ಕೂ ಹೆಚ್ಚು ಜನ ಗೂಗಲ್ ಮೂಲಕ ಸೇರಲಿದ್ದಾರೆ. ವೀಡಿಯೋ ಮೂಲಕ ಈ ಮದುವೆಯ ಸಂಭ್ರಮವನ್ನ ಕಂಣ್ತುಂಬಿಕ್ಕೊಳ್ಳುತ್ತಾರೆ. ನಂತರ ಜೋಮ್ಯಾಟೋ ಮೂಲಕ, ಅವರೆಲ್ಲರ ಮನೆಗೆ ಊಟ ಕಳುಹಿಸಲಾಗತ್ತೆ. ಈ ಬಗ್ಗೆ ಮಾತನಾಡಿರುವ ಜೋಮ್ಯಾಟೋ ಕೆಲಸಗಾರರೊಬ್ಬರು, ಇದು ತುಂಬಾ ಒಳ್ಳೆಯ ಮತ್ತು ಹೊಸ ಐಡಿಯಾ. ಇವರು ಹೇಳುವ ಕಡೆಗೆ ಮದುವೆ ಊಟವನ್ನು ತಲುಪಿಸುವ ಜವಾಬ್ದಾರಿ ನಮ್ಮದು, ಇದಕ್ಕಾಗಿ ಈಗಾಗಲೇ ನಾವು ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ.

- Advertisement -

Latest Posts

Don't Miss