ಮದುವೆ ಬಗ್ಗೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿರರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇಂದು ಕೂಡ ಈ ಬಗ್ಗೆ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನ ಪಡೆದ ಬಗ್ಗೆ ಟ್ವೀಟ್ ಮಾಡಿರು ರಾಮ್ ಗೋಪಾಲ್ ವರ್ಮಾ, ಮದುವೆ ಅನ್ನೋದು, ಪೂರ್ವಜರು ಹೇರಿರುವ ಕೆಟ್ಟ ಪದ್ಧತಿ ಎಂದಿದ್ದಾರೆ.
ಇತ್ತೀಚೆಗೆ ಸಮಂತಾ ಮತ್ತು ನಾಗಚೈತನ್ಯ ಕೂಡ ವಿಚ್ಛೇದನ ಪಡೆದರು. ಚಿರಂಜೀವಿ ಪುತ್ರಿಯ ವೈವಾಹಿಕ ಜೀವನ ಕೂಡ ಅಂತ್ಯಗೊಂಡಿದೆ. ಈ ವಿಷಯಗಳನ್ನಿಟ್ಟುಕೊಂಡು ಟ್ವೀಟ್ ಮಾಡಿರುವ ಆರ್‌ಜಿವಿ, ಮದುವೆ ಅನ್ನೋದು ಪೂರ್ವಜರು ಹೇರಿರುವ ಅತ್ಯಂತ ಕೆಟ್ಟ ಪದ್ಧತಿ, ಮದುವೆ ಅಂದ್ರೆ ಬೇಸರ ಮತ್ತು ಅಸಂತೋಷದ ಚಕ್ರವಿದ್ದಂತೆ. ಜೀವನ ಪುತ್ರಿ ಆ ಚಕ್ರವನ್ನು ನಡೆಸಿಕೊಂಡು ಹೋಗಬೇಕು. ವಿಮೋಚನೆ ಪಡೆಯುವುದಕ್ಕಾಗಿಯೇ ಸಂಗೀತವನ್ನು ವಿಚ್ಛೇದನದೊಂದಿಗೆ ಆಚರಿಸಬೇಕು ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಮೊದಲು ಮಮದುವೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ರಾಮ್ ಗೋಪಾಲ್ ವರ್ಮಾ, ಮದುವೆ ಅನ್ನೋದು ನರಕದಲ್ಲಿ ನಿಶ್ಚಯವಾಗುತ್ತೆ, ಸ್ವರ್ಗದಲ್ಲಲ್ಲ ಎಂದು ಟ್ವೀಟ್ ಮಾಡಿದ್ದರು. ಇಂದು ನಟ ಧನುಷ್ ಮತ್ತು ರಜನಿಕಾಂತ್ ಮಗಳಾದ ಐಶ್ವರ್ಯಾ ರಜನಿಕಾಂತ್, ತಮ್ಮ 18 ವರ್ಷದ ವೈವಾಹಿಕ ಜೀವನಕ್ಕೆ ನಾಂದಿ ಹಾಡಿದ್ದಾರೆ.