ದೇಶದ ಇತಿಹಾಸದಲ್ಲಿಯೇ ಮೊದಲನೇ ಬಾರಿಗೆ ರಾತ್ರಿವೇಳೆ ಪ್ರಕರಣವೊಂದರ ವಿಚಾರಣೆ ನಡೆಸಿ ಇತಿಹಾಸ ಸೃಷ್ಟಿ ಮಾಡಿದೆ. ಕೊಚ್ಚಿ ಬಂದರಿ(Port of Kochi)ನಲ್ಲಿ ಲಂಗರು ಹಾಕಿದ್ದ ಹಡಗು ನಿಗದಿತ ಶುಲ್ಕವನ್ನು ನೀಡಲು ನಿರಾಕರಿಸಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 11:30 ಕ್ಕೆ ಕೇರಳದ ಹೈಕೋರ್ಟ್(High Court of Kerala) ನ ಜಸ್ಟಿಸ್ ದೇವನ್ ರಾಮಚಂದ್ರನ್(Justice Devan Ramachandran) ಅವರು ವಿಡಿಯೋ ಕಾನ್ಫರೆನ್ಸ್(Video Conference)ಮೂಲಕ ವಿಚಾರಣೆ ನಡೆಸಿ ಪಾವತಿಸಬೇಕಾದ ಮೊತ್ತ ಪಾವತಿಯಾಗದ್ದಿದ್ದಲ್ಲಿ ಹಡಗನ್ನು ವಶಪಡಿಸಿಕೊಳ್ಳುವಂತೆ ಆದೇಶ ನೀಡಿದ್ದಾರೆ. ಒಟ್ಟು 2.44 ಕೋಟಿ ರೂಗಳನ್ನು ಹಡಗು ಮಾಲೀಕರು ಕಟ್ಟಬೇಕಿತ್ತು, ಪಾವತಿಸದ ಕಾರಣ ಬಾಕಿ ಇರುವ ಮೊತ್ತವನ್ನು 25000 ಬಡ್ಡಿ ಸೇರಿಸಿ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.




