Saturday, September 21, 2024

Latest Posts

ಕಣ್ಣು ರೆಪ್ಪೆ ಬಡಿಯುವುದರಿಂದ ಒಳ್ಳೆಯಾ ಕೆಟ್ಟದಾ..

- Advertisement -

ಕಣ್ಣು ರೆಪ್ಪೆ ಬಡ್ಕೋತಾ ಇದೆ ಏನಾದರೂ ದುರಂತ ನಡೆಯಬಹುದೇ ಅಥವಾ ಒಳ್ಳೆಯದು ಆಗಬಹುದಾ ಎನ್ನುವ ಮಾತನ್ನು ಕೆಲವರು ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ ಇದು ಕೇವಲ ಮೂಢ ನಂಬಿಕೆ ಅಂತ ಹೇಳುವವರು ಇದ್ದಾರೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇಹದ ಆಗು-ಹೋಗುಗಳಿಗೆ ತನ್ನದೇ ಆದ ಕಾರಣಗಳು ಇರುತ್ತದೆ. ಇದು ಒಳ್ಳೆಯದಾ, ಕೆಟ್ಟದ್ದ ಎನ್ನುವ ಚರ್ಚೆಗಳು ಆಗುತ್ತಲೇ ಇರುತ್ತದೆ. ನಮ್ಮ ಕಣ್ಣು ತುಂಬಾ ಬಡಿಯುತ್ತಾ ಇರುತ್ತದೆ. ಇದು ನಮ್ಮ ಜೀವನದಲ್ಲಿ ಸಂಭವಿಸ ಬಹುದಾದ ಕೆಲವು ಘಟನೆಗಳ ಬಗ್ಗೆ ಪ್ರಕೃತಿ ನೀಡುವ ಸೂಚನೆ. ಏನಾದರೂ ಶುಭ ಅಥವಾ ಅಶುಭ ನಡೆಯುವುದರ ಸಂಕೇತ ಇದಾಗಿದೆ ಎಂದು ಹೇಳುತ್ತಾರೆ. ಆದರೆ ಕೆಲವು ಸಂದರ್ಭದಲ್ಲಿ ಇದು ಕೇವಲ ಒಣ ಕಣ್ಣುಗಳು, ನಿಶ್ಯಕ್ತಿ ಖನಿಜಾಂಶಗಳ ಕೊರತೆ ಅಥವಾ ಒತ್ತಡ ಕೂಡ ಆಗಿರಬಹುದು. ನಿಮ್ಮ ಕಣ್ಣು ಬಡೆದು ಕೊಳ್ಳಲು ಈ ಯಾವುದು ಕಾರಣ ಇಲ್ಲದೆ ಇದ್ದರೆ. ಆಗ ಇದು ಕೆಲವೊಂದು ಅತೀಂದ್ರಿಯ ಶಕ್ತಿ ಎಂದು ಕೂಡ ಹೇಳುತ್ತಾರೆ. ಇನ್ನೂ ಕಣ್ಣು ಬಡೆದು ಕೊಳ್ಳಲು ಕಾರಣ ಏನು ಎಂದು ತಿಳಿಯೋಣ ಬನ್ನಿ.

ಮೊದಲನೆಯದು ಬಲ ಕಣ್ಣು ಬಡೆದರೆ ಏನಾಗುತ್ತದೆ ಎಂದರೆ ಪುರುಷ ಅಥವಾ ಮಹಿಳೆ ಇರಲಿ ಬಲ ಕಣ್ಣು ಬಡಿಯುತ್ತಾ ಇದ್ದರೆ. ಆಗ ಅದಕ್ಕೆ ವಿಭಿನ್ನವಾದ ಕಾರಣ ಇವೆ. ಪುರುಷರಲ್ಲಿ ಬಲ ಕಣ್ಣು ಬಡೆದರೆ ಅದು ಶುಭ ಎಂದು ಹೇಳುತ್ತಾರೆ. ಅದೇ ಮಹಿಳೆಯ ಕಣ್ಣು ಬಡಿಯುತ್ತಾ ಇದ್ದರೆ ಅದನ್ನು ಅಶುಭ ಎಂದು ಹೇಳುತ್ತಾರೆ. ಪುರುಷರ ಬಲ ಕಣ್ಣು ಬಡಿಯುತ್ತಾ ಇದ್ದರೆ ಅವರಿಗೆ ವೃತ್ತಿಯಲ್ಲಿ ಪ್ರಗತಿ ಉಂಟಾಗುತ್ತದೆ. ಅದೇ ಮಹಿಳೆಯರಲ್ಲಿ ಬಲ ಕಣ್ಣು ಬಡಿಯುತ್ತಾ ಇದ್ದರೆ ಅವರು ಮಾಡುವ ಪ್ರತಿಯೊಂದು ಕೆಲಸದಲ್ಲಿ ಸಮಸ್ಯೆ ಬರುತ್ತದೆ. ಇನ್ನೂ ಎಡ ಕಣ್ಣು ಬಡಿದರೆ ಏನಾಗುತ್ತದೆ ಸಾಮಾನ್ಯವಾಗಿ ಎಡ ಕಣ್ಣು ಬಡಿಯುತ್ತಾ ಇದ್ದರೆ. ಇದು ಪುರುಷರಿಗೆ ತುಂಬಾ ಅಶುಭ ಎಂದು ಹೇಳುತ್ತಾರೆ. ಹಾಗೆ ಇದು ಮಹಿಳೆಯರಿಗೆ ತುಂಬಾ ಶುಭ ಎಂದು ಕೂಡ ಹೇಳುತ್ತಾರೆ. ಕಣ್ಣ ರೆಪ್ಪೆಯು ಬಡಿಯುತ್ತಾ ಇದ್ದರೆ ಆಗ ಮಹಿಳೆಯರಿಗೆ ಏನೋ ಶುಭ ಸುದ್ದಿ ಬರುತ್ತದೆ ಎಂದು ಅರ್ಥ ಮಾಡಿ ಕೊಳ್ಳಬಹುದು. ಇನ್ನೂ ಮೂರನೆಯದು ನಿಖರ ಜಾಗ ಹಾಗೂ ಒಳ್ಳೆಯ ಸೂಚಕಗಳು ಕಣ್ಣಿನ ಮೇಲಿನ ರೆಪ್ಪೆಯು ಬಡಿಯುತ್ತಾ ಇದ್ದರೆ ಆಗ ಇದನ್ನು ಉತ್ತಮ ಶುಭ ಸೂಚಕ ಎಂದು ಹೇಳುತ್ತಾರೆ.

ಕಣ್ಣಿನ ಕೆಳಗಿನ ರೆಪ್ಪೆಯ ಒಳಗಿನ ಭಾಗದಲ್ಲಿ ಇರುವ ಕಣ್ಣಿನ ರೆಪ್ಪೆ ಅಂದರೆ ಮೂಗಿನ ಸಮೀಪದ ಭಾಗ ಬಡಿಯುತ್ತಾ ಇದ್ದರೆಆಗ ಇದು ಶುಭ ಎಂದು ಹೇಳುತ್ತಾರೆ. ಇದು ಒಳ್ಳೆಯ ಸುದ್ಧಿ ಬರುವ ಸಂಕೇತ ಎಂದು ಕೂಡ ಹೇಳುತ್ತಾರೆ. ಕಣ್ಣಿನ ಮೇಲಿನ ಭಾಗದ ರೆಪ್ಪೆ ಅಂದರೆ ಕಿವಿಗೆ ಹತ್ತಿರದ ಭಾಗ ಬಡಿಯುತ್ತಾ ಇದ್ದರೆ ಆಗ ಇದನ್ನು ತುಂಬಾ ಅಶುಭ ಎಂದು ಹೇಳುತ್ತಾರೆ. 

- Advertisement -

Latest Posts

Don't Miss