Belagavi : ಪತಿಯಿಂದ ಕಿರುಕುಳ ಪತ್ನಿ,ಮಗ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣು..!

ಬೆಳಗಾವಿ : ಬುದ್ಧಿಮಾಂದ್ಯ(Dementia)ಮಕ್ಕಳು ಹುಟ್ಟಿದ ಕಾರಣಕ್ಕೆ ಪತಿ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಪತ್ನಿ ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ಕಂಡುಬಂದಿದೆ. ಈ ಘಟನೆ ಬೆಳಗಾವಿ(Belagavi) ಜಿಲ್ಲೆಯ ಯರಗಟ್ಟಿ ತಾಲೂಕಿನ ಬೊಳಕಡಬಿ ಗ್ರಾಮದಲ್ಲಿ ಸಂಭವಿಸಿದ್ದು , ಸೇವಂತಿ ಪ್ಯಾಟಿ (32) ಮತ್ತು ಮಗ ಮಹಾಂತೇಶ್ ಪ್ಯಾಟಿ (12) ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ. ಸೇವಂತಿ ಮತ್ತು ಬೆಳ್ಳಿಯಪ್ಪ ದಂಪತಿಗೆ ಎರಡು ಮಕ್ಕಳು. ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ಬೆಳ್ಳಿಯಪ್ಪ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗುತ್ತಿದೆ. ಒಂದು ಮಗುವನ್ನು ಸೋದರಿ ಮನೆಯಲ್ಲಿ ಬಿಟ್ಟಿದ್ದ ಸೇವಂತಿ ಇನ್ನೊಂದು ಮಗುವನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡಿದ್ದಳು. ಪತಿ ಬೆಳ್ಳಿಯಪ್ಪ ಎರಡನೇ ಮದುವೆಯಾಗುವುದಾಗಿ ಬೆದರಿಕೆ ಹಾಕುತ್ತಿದ್ದ ಎಂಬುದು ತಿಳಿದುಬಂದಿದೆ, ನೆನ್ನೆಯು ಮನೆಯಲ್ಲಿ ಇದೇ ವಿಷಯವಾಗಿ ಜಗಳ ನಡೆದಿದ್ದು ಮಗು ಮೇಲೆ ಹಲ್ಲೆ ಮಾಡಿರುವ ಆರೋಪ ಸಹ ಕೇಳಿ ಬಂದಿದೆ. ಬೇಸತ್ತ ಪತ್ನಿ ತನ್ನ ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

About The Author