Monday, December 23, 2024

Latest Posts

Congress Leader H.B. Patil ಹೃದಯಾಘಾತದಿಂದ ನಿಧನ..!

- Advertisement -

ಕಾಂಗ್ರೆಸ್  (Congress) ಪಕ್ಷದ ಹಿರಿಯ ಮುಖಂಡ ಹನುಮಂತ ಗೌಡ ಭೀಮನಗೌಡ ಪಾಟೀಲ (Hanumath Gowda Bhimana Patil) ಹೃದಯಾಘಾತದಿಂದ (Heart Attack) ನಿಧರಾಗಿದ್ದಾರೆ.ಬಾಗಲಕೋಟೆ ಜಿಲ್ಲೆ ಬಾದಾಮಿ (Badami) ತಾಲೂಕಿನಲ್ಲಿರುವ ರಡ್ಡೇರ ತಿಮ್ಮಾಪುರದ ತಮ್ಮ ಸ್ವಗ್ರಾಮದಲ್ಲಿ ಹೃದಯಾಘಾತಕ್ಕೊಳಗಾಗಿದ್ದರು, ಅವರನ್ನು ತಕ್ಷಣವೇ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ಸೇರಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಎಚ್ ಬಿ ಪಾಟೀಲ ಎಂದು ಪ್ರಸಿದ್ಧರಾಗಿದ್ದಇವರಿಗೆ 80 ವರ್ಷ ವಯಸ್ಸಾಗಿತ್ತು. ಪತ್ನಿ, ಐವರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನನ್ನು ಅಗಲಿದ್ದಾರೆ. ಪಾಟೀಲರ ಮಗ ಡಾ ಭೀಮನಗೌಡ ಪಾಟೀಲ್(Dr Bhimanaguda Patil)ಲಂಡನ್ ನಲ್ಲಿ ನ್ಯೂರೋಲಾಜಿಸ್ಟ್ (Neurologist) ಆಗಿ ಕೆಲಸ ನಿರ್ವಹಿಸುತ್ತಿದ್ದು, ಅವರು ಅಲ್ಲಿಂದ ಬರಬೇಕಿದ್ದು,ಅವರ ಅಂತಿಮ ಸಂಸ್ಕಾರ ಬುಧವಾರ ಮಧ್ಯಾಹ್ನ ಸ್ವಗ್ರಾಮದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಪಾಟೀಲರು 1984-89 ರ ಸಮಯದಲ್ಲಿ ಬಾಗಲಕೋಟೆಯ ಸಂಸದರಾಗಿದ್ದರು. ಇಂದಿರಾ ಗಾಂಧಿಯವರ ನಿಧನದ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ 414ಕ್ಕೂ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆದ ಸಂದರ್ಭದಲ್ಲಿ ಪಾಟೀಲ್​ ಅವರು ಬಾಗಲಕೋಟೆಯಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು. ಪಕ್ಷದಲ್ಲಿ ಯಾವುದೇ ಸ್ಥಾನಮಾನ ಸಿಗಲಿ ಬಿಡಲಿ ಎಂದಿಗೂ ಪಕ್ಷದ ವಿರುದ್ಧ ಮಾತನಾಡದೇ, ಪಕ್ಷ ನಿಷ್ಠೆ ಮೆರೆದಿದ್ದರು. ಇನ್ನು ಸಂಸದರಾಗಿದ್ದ ಸಮಯದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದರು. ವಿಜಯಪುರ ಜಿಲ್ಲೆಯ ನಂದಿ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಲೈಸೆನ್ಸ್ ನೀಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ, ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ನೂಲಿನ ಗಿರಣಿ ಚೇರ್ಮನ್ ಆಗಿ ಕಾರ್ಯನಿರ್ವಹಿಸಿದ್ದರು.

.

- Advertisement -

Latest Posts

Don't Miss