15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಒಪ್ಪಿಗೆ..!

ಬೆಂಗಳೂರು : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (Senior Government Primary School)ಗಳಲ್ಲಿನ ಪದವೀಧರ ಪ್ರಾಥಮಿಕ ಶಿಕ್ಷಕರ 6 ರಿಂದ 8ನೇ ತರಗತಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಒಪ್ಪಿಗೆ (government agreed) ನೀಡಿದೆ. ಈ ಕುರಿತು ಶೀಘ್ರವೇ ಆದೇಶ ಪ್ರಕಟವಾಗುವ ನಿರೀಕ್ಷೆ ಇದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ (Public Education Department Commissioner’s Office) ಪದವೀಧರ ಪ್ರಾಥಮಿಕ ಶಿಕ್ಷಕರು ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲೆಗಳಿಗೆ ಪತ್ರ ಬರೆದಿದೆ.

ಒಟ್ಟು 15,000 ಹುದ್ದೆಗಳ ಭರ್ತಿಗೆ ಸರ್ಕಾರದ ಆದೇಶವನ್ನು ಕಾಯ್ದಿರಿಸಿ ಜಿಲ್ಲಾ ಉಪ ನಿರ್ದೇಶಕರುಗಳ ಹಂತದಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಅಗತ್ಯವಿರುವ ಪೂರ್ವ ಸಿದ್ಧತೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕರು ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ ಒಟ್ಟು 5000 ಹುದ್ದೆಗಳನ್ನು ಹಾಗೂ ಉಳಿದ 28 ಜಿಲ್ಲೆಗಳಲ್ಲಿನ ಒಟ್ಟು 10000 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಜಿಲ್ಲಾವಾರು ಖಾಲಿ ಹುದ್ದೆಗಳ ಹಂಚಿಕೆಯಂತೆ 6/7 ಮತ್ತು 6/8ನೇ ತರಗತಿಗಳಿಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಆರ್‌. ಟಿ. ಇ ನಿಯಮಗಳಂತೆ ಅವಶ್ಯವಿರುವ ವಿಷಯವಾರು ಹುದ್ದೆಯನ್ನು, ಶಾಲಾವಾರು ತಾಲೂಕುವಾರು ಹುದ್ದೆಗಳನ್ನು ಗುರುತಿಸಿಕೊಂಡು  ನಿಗದಿಪಡಿಸಿಕೊಂಡು ವಿಷಯವಾರು ವರ್ಗೀಕರಿಸಿಕೊಳ್ಳಬೇಕು. ಪದವೀಧರ ಪ್ರಾಥಮಿಕ ಶಿಕ್ಷಕರು 6 ರಿಂದ 7ನೇ ತರಗತಿ ಆಂಗ್ಲ ಗಣಿತ-ವಿಜ್ಞಾನ ,ಸಮಾಜ ಪಾಠಗಳು, ಜೀವ ವಿಜ್ಞಾನ ಭಾಷೆಗಳು. ಪ್ರಸ್ತುತ ನೇಮಕಾತಿಗೆ ಅಧಿಸೂಚಿಸಲು ಇರುವ ಹುದ್ದೆಗಳ ಮ್ಯಾಟ್ರಿಕ್ಸ್ ಘೋಷ್ವಾರ ವಿಷಯವಾರು ಹುದ್ದೆವಾರು ರೋಸ್ಟರ್ ಬಿಂದು ಸಹಿತ ಸೀಟ್ ಮ್ಯಾಟ್ರಿಕ್ಸ್ ತಾತ್ಕಾಲಿಕವಾಗಿ ಸಿದ್ಧಪಡಿಸಿಕೊಳ್ಳತಕ್ಕದ್ದು ಎಂದು ಸೂಚನೆ ನೀಡಲಾಗಿದೆ.

ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 7ನೇ ತರಗತಿ) ನೇಮಕಾತಿಗೆ ಜಿಲ್ಲಾವಾರು ಹಂಚಿಕೆ ಹೀಗಿದೆ.

ಮೈಸೂರು 504, ಚಾಮರಾಜನಗರ 255, ಮಂಡ್ಯ 507, ಹಾಸನ 224, ಚಿಕ್ಕಮಗಳೂರು 139, ಕೊಡಗು 116, ದಕ್ಷಿಣ ಕನ್ನಡ 567, ಉಡುಪಿ 230, ಬೆಳಗಾವಿ 732 ಹುದ್ದೆಗಳು. ಚಿಕ್ಕೋಡಿ 994, ಉತ್ತರ ಕನ್ನಡ 155, ಶಿರಸಿ 450, ಗದಗ 247, ಧಾರವಾಡ 289, ವಿಜಯಪುರ 860, ಬಾಗಲಕೋಟೆ 733, ಹಾವೇರಿ 380. ಬೆಂಗಳೂರು ಉತ್ತರ 146 + 13* (ಬಿಬಿಎಂಪಿ ವ್ಯಾಪ್ತಿಯ ಶೇಕಡಾ 8 ಸ್ಥಳೀಯ ವೃಂದದ ಹುದ್ದೆಗಳು. ಬೆಂಗಳೂರು ದಕ್ಷಿಣ 157 + 14* ಹುದ್ದೆಗಳು. ಕಲ್ಯಾಣ ಕರ್ನಾಟಕ; ಕಲಬುರಗಿ 1022, ಯಾದಗಿರಿ 954, ಬಳ್ಳಾರಿ 1035, ರಾಯಚುರು 1078, ಕೊಪ್ಪಳ 575, ಬೀದರ್ 336. ಬೆಂಗಳೂರು ಗ್ರಾಮಾಂತರ 173, ಕೋಲಾರ 186, ಚಿಕ್ಕಬಳ್ಳಾಪುರ 250, ತುಮಕೂರು 308, ಮಧುಗಿರಿ 209, ಚಿತ್ರದುರ್ಗ 346, ದಾವಣಗೆರೆ 114, ಶಿವಮೊಗ್ಗ 506, ರಾಮನಗರ 196.

.

About The Author