ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (Devanahalli) ತಾಲೂಕಿನ ಕೊಯಿರಾ (KOIRA) ಎಂಬ ಗ್ರಾಮದಲ್ಲಿ ಅಪರೂಪದ ಆನೆ ಬೇಟೆ (Elephant hunting)ಯ ಪ್ರಾಚೀನ ವೀರಗಲ್ಲನ್ನು (veeragallu) ಇತಿಹಾಸ ಅನ್ವೇಷಕ ಬಿಟ್ಟಸಂದ್ರ ಗುರುಸಿದ್ದಯ್ಯ (Bitasandra Gurusiddhayya) ಪತ್ತೆ ಮಾಡಿದ್ದು, ಶಾಸಕ ನಿಸರ್ಗ ನಾರಾಯಣಸ್ವಾಮಿ (MLA Nisarga Narayanaswamy) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವನಹಳ್ಳಿ ತಾಲೂಕಿನ ಕೊಯಿರಾ ಗ್ರಾಮದ ಕೆ.ಸಿ. ರಾಮಯ್ಯನವರ ಹೊಲದಲ್ಲಿ 12 ನೇ ಶತಮಾನದ (12th century) ಅಪರೂಪದ ವೀರಗಲ್ಲನ್ನು ಇತಿಹಾಸ ಅನ್ವೇಷಕ ಬಿಟ್ಟಸಂದ್ರ ಗುರುಸಿದ್ದಯ್ಯ ಪತ್ತೆ ಮಾಡಿದ್ದಾರೆ, 6 ಅಡಿ ಅಗಲ ,5 ಅಡಿ ಎತ್ತರ ಮುಕ್ಕಾಲು ಅಡಿ ದಪ್ಪದ ಗ್ರಾನೈಟ್ ಶಿಲೆಯ ವೀರಗಲ್ಲು ಇದಾಗಿದೆ. ಮದವೇರಿದ ಆನೆ ಈ ಪ್ರದೇಶದಲ್ಲಿ ಪುಡಾಟಿಕೆ ನಡೆಸುತ್ತಿದ್ದಾಗ ವೀರ ತನ್ನ ಬೇಟೆ ನಾಯಿಗಳ ಸಹಾಯದಿಂದ ಆನೆಯ ಮೇಲೆ ಎರಗಿದ್ದಾನೆ, ಆನೆ ದಾಳಿಗೆ ವೀರ ಮಡಿದಿದ್ದಾನೆ, ವೀರನ ವೀರತನದ ನೆನಪಿಗಾಗಿ ವೀರಗಲ್ಲನ್ನು ಕೆತ್ತಿಸಲಾಗಿದೆ, ಶಾಸಕ ನಿಸರ್ಗ ನಾರಾಯಣ ಸ್ವಾಮಿ ಭೇಟಿ ಮಾಡಿ ವೀರಗಲ್ಲಿನ ಮಹತ್ವವನ್ನ ತಿಳಿದು ಕೊಂಡು, ಶಾಸನ ಮತ್ತು ವೀರಗಲ್ಲುಗಳ ರಕ್ಷಣೆ ಅಗತ್ಯವೆಂದು ಹೇಳಿದರು.
ಅಭಿಜಿತ್, ಕರ್ನಾಟಕ ಟಿವಿ, ದೊಡ್ಡಬಳ್ಳಾಪುರ.