Wednesday, July 2, 2025

Latest Posts

Lata Mangeshkar : ಗಾನ ಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ್ ಇನ್ನು ನೆನಪು ಮಾತ್ರ..!

- Advertisement -

ಭಾರತದ ಗಾನ ಕೋಗಿಲೆ ಭಾರತರತ್ನ (Bharat Ratna) ಪಡೆದಿರುವ ಲತಾ ಮಂಗೇಶ್ಕರ್ (Lata Mangeshkar) ತಮ್ಮ ಗಾನಯಾನವನ್ನು ಮುಗಿಸಿ ತಮ್ಮ 92 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಜನವರಿ ಮೊದಲ ವಾರದಲ್ಲಿ ಅವರಿಗೆ ಕೊರೋನಾ ಪಾಸಿಟಿವ್ (Corona Positive) ಬಂದಿತ್ತು. ಜನವರಿ 11ರಂದು ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ (Breach Candy Hospital) ದಾಖಲಿಸಲಾಗಿತ್ತು. ಕೆಲ ದಿನಗಳ ನಂತರ ಚೇತರಿಸಿಕೊಂಡಿದ್ದರು. ನಂತರ ಕಳೆದ ಮೂರ್ನಾಲ್ಕು ದಿನಗಳಿಂದ ಅವರ ಸ್ಥಿತಿ ಗಂಭೀರವಾಗಿತ್ತು. ಅವರಿಗೆ ದೂರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನ ನೀಡಲಾಗುತ್ತಿತ್ತು. ಆದರೆ ಇಂದು ಅವರು ನಮ್ಮನ್ನೆಲ್ಲಾ ಅಗಲಿ ಇರುವುದು ತುಂಬಾ ಬೇಸರದ ವಿಷಯ. ತಮ್ಮ 13ನೇ ವಯಸ್ಸಿನಲ್ಲಿ ಅವರು ಹಾಡುಗಳನ್ನು ಹಾಡಲು ಪ್ರಾರಂಭಿಸಿದರು. ಭಾರತದ 36 ವಿವಿಧ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ನಮ್ಮ ಕನ್ನಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (Krantiveera Sangolli Rayanna) ಚಿತ್ರದ ಬೆಳ್ಳನೆ ಬೆಳಗಾಯಿತು ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಹಿಂದಿಯಲ್ಲಿ ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಅವರ ಹಾಡುಗಳಿಗೆ ತಲೆದೂಗದವರೆ ಇಲ್ಲ. 1953ರಲ್ಲಿ ‘Vaadal’ ಮರಾಠಿ ಸಿನಿಮಾ, 1953ರಲ್ಲಿ ‘Jhaanjhar’ ಎಂಬ ಹಿಂದಿ ಸಿನಿಮಾ, 1955ರಲ್ಲಿ ‘Kanchan Ganga’ ಎಂಬ ಹಿಂದಿ ಸಿನಿಮಾ, 1990ರಲ್ಲಿ ‘Lekin’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಭಾರತ ರತ್ನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.

- Advertisement -

Latest Posts

Don't Miss