ಹಿಜಾಬ್ (hijab) ಶಾಲಾ-ಕಾಲೇಜುಗಳಲ್ಲಿ ಧರಿಸುವುದಕ್ಕೆ ಅನುಮತಿ ಕೋರಿ ಯುವತಿ ಅರ್ಜಿ ಸಲ್ಲಿಸಿದ ಕಾರಣ ಇಂದು ಹೈಕೋರ್ಟ್ (High Court) ನಲ್ಲಿ ವಿಚಾರಣೆ ಪ್ರಾರಂಭವಾಗಿದೆ. ಹೈಕೋರ್ಟ್ ಏಕಸದಸ್ಯ ಪೀಠ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ (Singular Court Justice Krishna S Dixit) ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಅವರು ಪ್ರಪಂಚ ನಮ್ಮಕಡೆ ನೋಡುತ್ತಿದೆ, ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ಮಾಡುವಂತಾಗಿದೆ. ಇಂತಹ ಪರಿಸ್ಥಿತಿಗಳು ಮುಂದುವರಿಯಬಾರದು, ವಾಟ್ಸಾಪ್ ಆನ್ ಮಾಡಿದ್ರೆ ನೂರಾರು ಮೆಸೇಜ್ ಗಳು ಬರುತ್ತಿದೆ. ಮೆಸೇಜ್ ಗಳು ಬರುತ್ತಿರುವುದು ನೋಡಿ ಮೊಬೈಲ್ ಬ್ಲಾಸ್ಟ್ ಆಗಿಲ್ಲ ಅಷ್ಟೇ ಎಂದು ಲಘು ಹಾಸ್ಯವನ್ನು ಮಾಡಿದ್ದಾರೆ. ಸರ್ಕಾರ ಹಾಗೂ ಅರ್ಜಿದಾರರ ವಾದ ಪ್ರತಿವಾದಗಳನ್ನು ಪಡೆಯುತ್ತಿದ್ದಾರೆ. ಇನ್ನು ಅರ್ಜಿದಾರರ ಪರ ದೇವದತ್ ಕಾಮತ್ (Devadat Kamath) ವಾದ ಮಂಡನೆ ಮಾಡುತ್ತಿದ್ದಾರೆ. ಹಿಜಾಬ್ ದರಿಸುವುದು ನಮ್ಮ ಹಕ್ಕು ಅದನ್ನು ಕುರಾನ್ (Quran) ನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ. ಈ ವೇಳೆ ನ್ಯಾಯಾಧೀಶರು ಕುರಾನ್ ನ ಪ್ರತಿಯನ್ನು ತರಿಸಿ ಉಲ್ಲೇಖವಿರುವದರ ಬಗ್ಗೆ ತಿಳಿಸಲು ಸೂಚಿಸಿದ್ದಾರೆ. ಕುರಾನ್ ಪ್ರತಿ ಧರಿಸಿದ ನಂತರ 25ನೇ ಪ್ಯಾರವನ್ನು ಓದಲು ಅರ್ಜಿದಾರರ ವಕೀಲರು ಕಾಮತ್ ತಿಳಿಸಿದ್ದಾರೆ. ಅದೇ ರೀತಿ ಈ ವಿಚಾರ ಕುರಿತು ಬೇರೆ ರಾಜ್ಯಗಳ ತೀರ್ಪನ್ನು ಸಹ ನೀಡಲಾಗುತ್ತಿದೆ. ಕೇರಳ ಹೈಕೋರ್ಟ್ ತೀರ್ಪನ್ನು ಸಹ ಇಲ್ಲಿ ಉಲ್ಲೇಖಿಸಲಾಗುತ್ತಿದೆ. ಕುರಾನ್ ನಲ್ಲಿ ವಸ್ತ್ರ ಸಂಹಿತೆಯ ಉಲ್ಲಂಘನೆಯ ಬಗ್ಗೆ ತಿಳಿಸಲಾಗಿದ್ದು, ಉಲ್ಲಂಘಿಸಿದರೆ ಶಿಕ್ಷೆ ಇದೆ ಎಂಬುದರ ಬಗ್ಗೆ ಸಹ ದೇವದತ್ ಕಾಮತ್ ತಿಳಿಸಿದ್ದಾರೆ. ಇನ್ನು ವಾದ-ಪ್ರತಿವಾದಗಳನ್ನು ಕೇಳಿದ ಹೈಕೋರ್ಟ್ ಏಕಸದಸ್ಯ ಪೀಠ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅರ್ಜಿಯ ವಿಚಾರಣೆಯನ್ನು ಮಧ್ಯಾಹ್ನದ 2:30ಕ್ಕೆ ಮುಂದೂಡಲಾಗಿದೆ.