Saturday, April 5, 2025

Latest Posts

Hijab Controversy ಕುರಿತು ಪ್ರಿಯಾಂಕ ಗಾಂಧಿ ನೀಡಿರುವ ಹೇಳಿಕೆಗೆ ಪ್ರಮೋದ್ ಮುತಾಲಿಕ್ ತಿರುಗೇಟು..!

- Advertisement -

ರಾಜ್ಯದಲ್ಲಿನ ಹಿಜಾಬ್ ವಿವಾದ (Hijab Controversy) ಕುರಿತಂತೆ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ (Priyanka Gandhi) ನೀಡಿರುವ ಹೇಳಿಕೆಗೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಹಿಜಾಬ್ ವಿವಾದ ಕುರಿತಂತೆ ಮಾತನಾಡಿರುವ ಅವರು, ಹೆಣ್ಣುಮಕ್ಕಳು ಯಾವ ಬಟ್ಟೆ ಧರಿಸಬೇಕು ಎಂಬುದು ಅವರ ಇಷ್ಟ. ಅವರು ಬಿಕಿನಿಯಾದರೂ ( bikini) ಧರಿಸಲಿ, ಮುಸುಕು ಆದರೂ ಧರಿಸಲಿ, ಜೀನ್ಸ್ (Jeans) ಆದರೂ ಹಾಕಲಿ ಅದು ಹಕ್ಕು, ಎಂದು ನೀಡಿರುವ ಹೇಳಿಕೆಗೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿರುಗೇಟು ನೀಡಿದ್ದು, ಪ್ರಿಯಾಂಕ ಗಾಂಧಿಯವರಿಗೆ ನಾಚಿಕೆಯಾಗಬೇಕು, ಶಾಲೆಗಳಲ್ಲಿ ಬಿಕಿನಿ ಹಾಕಲು ಅವಕಾಶ ಮಾಡಿಕೊಡುತ್ತೀರಾ?, ನಿಮ್ಮ ಅಜ್ಜಿ ಸಮವಸ್ತ್ರ ಸಂಹಿತೆ ಜಾರಿ ತಂದಿದ್ದಾರೆ. ಸಮವಸ್ತ್ರ (Uniform) ಧರಿಸುವುದರಿಂದ ಸಮಾನತೆ (Equality) ಇರುತ್ತದೆ. ಇಂಥ ಹೇಳಿಕೆಗಳನ್ನು ನೀಡುವಾಗ ಯೋಚಿಸಿ ಮಾತನಾಡಬೇಕು ಎಂದು ಧಾರವಾಡದಲ್ಲಿ ಪ್ರಮೋದ್ ಮುತಾಲಿಕ್ ಟಾಂಗ್ ನೀಡಿದ್ದಾರೆ.

- Advertisement -

Latest Posts

Don't Miss