ಹಿಜಾಬ್ ವಿವಾದ (Hijab Controversy) ರಾಜ್ಯದಾದ್ಯಂತ ಭುಗಿಲೆದ್ದಿದ್ದು ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ನಿನ್ನೆ ದಾವಣಗೆರೆ ಜಿಲ್ಲೆಯ ಹರಿಹರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ (Government Undergraduate College Harihara) ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು (Saffron was wearing a shawl), ಅದನ್ನು ತೆಗೆದು ಹಾಸಿಗೆ ಬರೆಯುವಂತೆ ತಿಳಿಸಿದಾಗ ಅವರು ಹಿಜಾಬ್ ತೆಗೆದರೆ ಮಾತ್ರ ನಾವು ತೆಗೆಯುತ್ತೇವೆ ಎಂದು ಗಲಾಟೆ ನಡೆಸಿದ್ದರು. ಈ ವೇಳೆ ಕೆಲವು ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ತೂರಾಟ (Stonewalling on the police) ನಡೆಸಿದ್ದರು. ಕಾಲೇಜಿನ ಬಳಿ ಬೈಕ್, ಕಾರು, ಸೇರಿದಂತೆ ಹಲವು ವಾಹನಗಳನ್ನು ಜಖಂಗೊಳಿಸಿದರು. ಈ ಕಾರಣ ಪೊಲೀಸರು ಲಘು ಲಾಟಿಚಾರ್ಜ್ ನಡೆಸಿದ್ದರು. ಇನ್ನು ಈ ಕುರಿತು ರಾಜ್ಯ ಸರ್ಕಾರ ಹೈಸ್ಕೂಲ್ ಹಾಗೂ ಕಾಲೇಜುಗಳಿಗೆ (high schools and colleges) ಮೂರು ದಿನ ರಜೆ ಘೋಷಿಸಿತ್ತು. ಆದ್ದರಿಂದ ದಾವಣಗೆರೆಯಲ್ಲಿ ಹಿಜಾಬ್ ವಿವಾದ ಹಾಗೂ ಕೇಸರಿ ಶಾಲು ಕುರಿತಂತೆ ಶಾಂತಿ ಕದಡುವ ದೃಷ್ಟಿಯಿಂದ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ದಾವಣಗೆರೆ (District Collector Mahantesh Beelaggi Davanagere) ಮಹಾನಗರ ಪಾಲಿಕೆ ಹಾಗೂ ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ 2:00 ಯಿಂದ ನಾಳೆ 12 ಗಂಟೆವರೆಗೆ ನಿಷೇದಾಜ್ಞೆಯನ್ನು ಜಾರಿ ಮಾಡಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಚರ್ಚೆ ನಡೆಸಿದ್ದು, ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದು, ಸಭೆ ಸಮಾರಂಭ ನಡೆಸುವುದು, ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವುದು, ಪ್ರಚೋದಿತ ಘೋಷಣೆಗಳನ್ನು ಕೂಗುವುದು, ಯಾವುದೇ ಒಂದು ಜಾತಿ,ಧರ್ಮಕ್ಕೆ, ದಕ್ಕೆ ತರುವಂತಹ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಈಗಾಗಲೇ ಸರ್ಕಾರಿ ಕಾರ್ಯಕ್ರಮಗಳು ನಿಗದಿಯಾಗಿದ್ದರೆ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಲು ತಿಳಿಸಲಾಗಿದೆ.