ಈ ರಾಶಿಯಲ್ಲಿ ಹುಟ್ಟಿದ ಗಂಡಸರು ಅವರ ಜೀವನದ ಸಂಗಾತಿಯನ್ನು ಮಹಾರಾಣಿಯಂತೆ ನೋಡಿಕೊಳ್ಳುತ್ತಾರೆ. ಅಂದರೆ ಈ ರಾಶಿಯ ಪುರುಷರು ಅತ್ಯುತ್ತಮ ಪತಿಯಾಗಿ ಇರುತ್ತಾರೆ. ರಾಶಿಯ ಮೂಲಕವೇ ವ್ಯಕ್ತಿಯ ಗುಣ ಮತ್ತು ಸ್ವಭಾವವನ್ನು ತಿಳಿದುಕೊಳ್ಳಬಹುದಾಗಿದೆ. ಪ್ರತಿಯೊಬ್ಬ ಮಹಿಳೆಯೂ ಸಹ ಒಳ್ಳೆಯ ಜೀವನ ಸಂಗಾತಿಯನ್ನು ಬಯಸುತ್ತಾಳೆ. ಇನ್ನೂ ಪತಿಯಾದವನು ಪ್ರತಿಯೊಂದು ಸಂದರ್ಭ ದಲ್ಲಿಯೂ ತನ್ನ ಜೊತೆಗೆ ಇರಬೇಕೆಂದು ಬಯಸುತ್ತಾಳೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕ ನೋಡಿ ಯಾವ ವ್ಯಕ್ತಿ ಯಾವ ಮಹಿಳೆಗೆ ಹೊಂದುತ್ತಾನೆಂದು ಹೇಳಲಾಗುತ್ತದೆ.ಅಲ್ಲದೆ ರಾಶಿ ನೋಡಿಯೇ ಯಾವ ವ್ಯಕ್ತಿ ಗಂಡನ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಬಲ್ಲ ಎಂಬುದನ್ನು ಹೇಳಬಹುದಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಆ ರಾಶಿಯವರಿಗೆ ಮಾತ್ರ ಗೊತ್ತು. ಹಾಗಾದ್ರೆ ಈ ಮೂರು ರಾಶಿಗಳು ಯಾವುವು ಹಾಗೂ ಯಾವ ವ್ಯಕ್ತಿಯನ್ನು ಪಡೆಯುವ ಸ್ತ್ರೀ ಧನ್ಯ ಎಂದು ಈ ಲೇಖನದಲ್ಲಿ ತಿಳಿಯೋಣ. ಮೊದಲನೆಯ ರಾಶಿ ವೃಷಭ ರಾಶಿ, ವೃಷಭ ರಾಶಿಯ ಗಂಡಸರು ಅಧಿಕವಾಗಿ ಹಾಸ್ಯ ಪ್ರಜ್ಞೆಯು ತುಂಬಾ ಚೆನ್ನಾಗಿರುತ್ತದೆ ಕಠಿಣ ಪರಿಸ್ಥಿತಿಯನ್ನು ಆರಾಮವಾಗಿ ನಿಭಾಯಿಸುತ್ತಾರೆ. ಸಂಗಾತಿಯ ಬಗ್ಗೆ ಹೆಚ್ಚು ಕಾಳಜಿವಹಿಸುವ ಅವರು ಸಂಗಾತಿಯ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತಾರೆ. ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವಲ್ಲಿ ತಮ್ಮ ಸಂಗಾತಿ ಹೆಚ್ಚು ಪ್ರಯತ್ನ ಪಡುತ್ತಾರೆ ಹಾಗೂ ಯಶಸ್ವಿ ಕೂಡ ಆಗುವುದರಲ್ಲಿ ಮುಂದು. ಎರಡನೆಯ ರಾಶಿ ಕಟಕ ರಾಶಿ. ಕಟಕ ರಾಶಿಯ ಪುರುಷರು ಒಳ್ಳೆಯ ಪತಿಯಾಗಿರುತ್ತಾರೆ. ಈ ರಾಶಿಯ ಗಂಡಸರು ತಮ್ಮ ಸಂಗಾತಿಯ ಪ್ರತಿಯೊಂದು ಆಸೆಯನ್ನು ಅರ್ಥ ಮಾಡಿಕೊಂಡು ತಿಳಿದುಕೊಂಡು ಈಡೇರಿಸುತ್ತಾರೆ. ಸಂಗಾತಿಯನ್ನು ಹೆಚ್ಚಾಗಿ ಪ್ರೀತಿಸುವ ಈ ರಾಶಿಯ ಗಂಡಸರು ಆಕರ್ಷಕ ಹಾಗೂ ಸುಂದರವಾಗಿ ಜೀವನ ನಡೆಸುತ್ತಾರೆ. ಈ ರಾಶಿಯ ವ್ಯಕ್ತಿಯನ್ನು ಮದುವೆ ಆಗುವ ಸಂಗಾತಿ ಎಂದಿಗೂ ಕೂಡ ಜೀವನದಲ್ಲಿ ಕಷ್ಟದ ಹಾದಿಯನ್ನು ತಿಳಿಯುವುದಿಲ್ಲ ಬಹಳ ಎಚ್ಚರಿಕೆಯಿಂದ ಜೀವನ ನಡೆಸುತ್ತಾರೆ. ಹಾಗೂ ಇವರ ಸಲುವಾಗಿ ದಾಂಪತ್ಯ ಕೂಡ ಅತ್ಯಂತ ಸುಗಮವಾಗಿ ಇರುತ್ತದೆ ಎಂದು ಹೇಳಬಹುದು ಇದರಲ್ಲಿ ಸಂಶಯ ಕೂಡ ಇರುವುದಿಲ್ಲ. ಇನ್ನೂ ಮೂರನೆಯ ರಾಶಿ ತುಲಾ ರಾಶಿ. ತುಲಾ ರಾಶಿಯವರು ತಮ್ಮ ಸಂಗಾತಿಯನ್ನು ಅತಿಯಾಗಿ ಪ್ರೀತಿಸುತ್ತಾರೆ. ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡುತ್ತಾರೆ. ಸಂಗಾತಿಯನ್ನು ಅವರು ಗೌರವಿಸುತ್ತಾರೆ. ಸಂಗಾತಿಗೆ ಆಗಾಗ ಆಶ್ಚರ್ಯ ನೀಡುವ ಈ ರಾಶಿಯವರು ಯಾವಾಗಲೂ ಸಂತೋಷವಾಗಿಡಲು ಬಯಸುತ್ತಾರೆ. ನಾವು ತಿಳಿಸಿರುವ ಈ ಮೂರು ರಾಶಿಯ ವ್ಯಕ್ತಿಗಳು ತಮ್ಮ ಸಂಗಾತಿಯನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಾರೆ ಅವರ ಮನಸ್ಸನ್ನು ಎಂದಿಗೂ ನೋಯಿಸಲು ಇಷ್ಟ ಪಡುವುದಿಲ್ಲ ಅವರ ಭಾವನೆಗಳಿಗೆ ಬೆಲೆ ಕೊಡುತ್ತಾರೆ .