B Sriramulu ಹೇಳಿಕೆ : ಸಾರಿಗೆ ನೌಕರರನ್ನು ಮರು ನೇಮಕ ಮಾಡಲಾಗುವುದು..!

ಸಾರಿಗೆ ನೌಕರರಿಗೆ ಸಾರಿಗೆ ಸಚಿವ ಬಿ ಶ್ರೀರಾಮುಲು (Transport Minister B Sriramulu) ಗುಡ್ ನ್ಯೂಸ್ ನೀಡಿದ್ದಾರೆ. ಸಾರಿಗೆ ನೌಕರರು (Transport employees) ಈ ಹಿಂದೆ ತಮ್ಮ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಠಾವಧಿ ಮುಷ್ಕರವನ್ನ ನಡೆಸಿದ್ದರು. ಈ ಸಂದರ್ಭದಲ್ಲಿ ನೌಕರರು ಕೆಲಸಕ್ಕೆ ಹಾಜರಾಗದೇ ಬಸ್‍ಗಳು ರಸ್ತೆಗಿಳಿದಿರಲಿಲ್ಲ, ನೌಕರರು ಮುಷ್ಕರ ಕೈಗೊಂಡ ಸಂದರ್ಭದಲ್ಲಿ ಸರ್ಕಾರ (Government) ಮುಷ್ಕರ ನಿರತರಿಗೆ ಎಚ್ಚರಿಕೆಯನ್ನ ನೀಡಿತ್ತು, ಸರ್ಕಾರದ ಎಚ್ಚರಿಕೆಗೆ ಜಗ್ಗದೆ ಮುಷ್ಕರ ಮುಂದುವರೆಸಿದ ಕಾರಣ ಅಂದಿನ ಸರ್ಕಾರ ಶಿಸ್ತುಕ್ರಮ ಕೈಗೊಂಡಿತ್ತು. ಈಗ  ಅವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ತಿಳಿಸಿದ್ದಾರೆ. ಇಂದು 100 ನೌಕರರು, ನಾಳೆ 200 ನೌಕರರ ಮರು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.ಉಳಿದವರಿಗೆ ಹಂತ ಹಂತವಾಗಿ ಮರು ನೇಮಕ ಮಾಡಲಾಗುತ್ತಿದೆ. ಈ ತಿಂಗಳ ಒಳಗೆ 700 ಮಂದಿಗೆ ನೇಮಕಾತಿ ನೀಡಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದರು. ಈಗ ನೇಮಕಗೊಂಡವರು ಇನ್ನುಮುಂದೆ ಮುಷ್ಕರಕ್ಕೆ ಹೋಗಬಾರದು ಎಂದು ಷರತ್ತು ವಿಧಿಸಲಾಗಿದೆ. ನೌಕರರು ಮುಷ್ಕರಕ್ಕೆ ಹೋದರೆ ನೌಕರಿ ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

About The Author