ಬೆಂಗಳೂರು : ದೇವಸ್ಥಾನಗಳಲ್ಲಿನ ಗಂಟೆ ನಾದಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಬೆಂಗಳೂರಿನ ದೇವಸ್ಥಾನಗಳಲ್ಲಿ ಹೆಚ್ಚಿನ ಶಬ್ದವನ್ನು ಉಂಟುಮಾಡುತ್ತಿರುವ ಗಂಟೆಗಳನ್ನು ಒಡೆಯ ಬಾರದೆಂದು ಪೊಲೀಸ್ ಇಲಾಖೆ ದೇವಸ್ಥಾನಗಳಿಗೆ ನೋಟಿಸನ್ನು ನೀಡಿದ್ದಾರೆ. ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನಕ್ಕೆ (Dodda Ganapati Temple) ನೋಟಿಸ್ ನೀಡಿದ್ದು, ದೇವಸ್ಥಾನದಲ್ಲಿ ಡಿಸಿಬಲ್ ಶಬ್ದಕ್ಕಿಂತ ಹೆಚ್ಚಿನ ಶಬ್ದವನ್ನು (More noise than decibel noise) ಇಂತು ಮಾಡಲಾಗುತ್ತಿದೆ ಎಂದು ಬಸವನಗುಡಿಯ ದೊಡ್ಡಗಣಪತಿ ಸಮೂಹ ದೇವಸ್ಥಾನಗಳ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚನೆಯನ್ನ ನೀಡಲಾಗಿದೆ. ಸೂಚನೆ ಹೊರತಾಗಿ ಹೆಚ್ಚಿನ ಶಬ್ದ ಬರುವಂತೆ ಗಂಟೆ ಹೊಡೆದಲ್ಲಿ ಪರಿಸರ ಮಾಲಿನ್ಯ ಕಾಯಿದೆ ಅಡಿಯಲ್ಲಿ ನಮೂನೆ 1986. ಶಬ್ದ ಮಾಲಿನ್ಯ ನಿಯಂತ್ರಣ ಮತ್ತು ನಿಯಂತ್ರಣ ನಿಯಮಗಳ ತಿದ್ದುಪಡಿ 2000 ಅಡಿಯಲ್ಲಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ದೊಡ್ಡ ಬಸವಣ್ಣ ದೇವಸ್ಥಾನ, ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ದೊಡ್ಡ ಗಣೇಶ ದೇವಸ್ಥಾನ, ಮಿಂಟೋ ಆಂಜನೇಯ ಸ್ವಾಮಿ ದೇವಸ್ಥಾನ, ಇನ್ನಿತರ ದೇವಸ್ಥಾನಗಳು ಸಮೂಹದಡಿಯಲ್ಲಿ ಇವೆ. ಇನ್ನು ಯಾವ ಪ್ರದೇಶದಲ್ಲಿ ಎಷ್ಟು ಪ್ರಮಾಣದ ಶಬ್ದ ಇರಬಹುದು ಎಂಬುದರ ಬಗ್ಗೆ ತಿಳಿಯುವುದಾದರೆ ಶಾಂತಿ ಪ್ರದೇಶಗಳಲ್ಲಿ ಬೆಳಗ್ಗೆ ವೇಳೆ 50 ಡೆಸಿಬಲ್, ರಾತ್ರಿಯ ವೇಳೆ 40 ಡೆಸಿಬಲ್. ಇನ್ನು ವಾಣಿಜ್ಯ ಪ್ರದೇಶಗಳಲ್ಲಿ ಬೆಳಗ್ಗೆ 65 ಡೆಸಿಬಲ್, ರಾತ್ರಿ ವೇಳೆ 55 ಡೆಸಿಬಲ್. ಇನ್ನು ಕೈಗಾರಿಕಾ ಪ್ರದೇಶಗಳಲ್ಲಿ ಬೆಳಗ್ಗೆ 75 ಡೆಸಿಬಲ್, ರಾತ್ರಿ 70 ಡೆಸಿಬಲ್. ಇನ್ನು ವಸತಿ ಪ್ರದೇಶಗಳಲ್ಲಿ, ಬೆಳಗ್ಗೆ 55 ಡೆಸಿಬಲ್, ರಾತ್ರಿ 45 ಡೆಸಿಬಲ್ ಗಿಂತ ಹೆಚ್ಚಿನ ಶಬ್ದವನ್ನು ಉಂಟು ಮಾಡುವಂತಿಲ್ಲ.

