ರಾಯಚೂರು : ರಾಯಚೂರಿನಲ್ಲಿ (raichur) ಹಿಜಾಬ್ ಸಂಘರ್ಷ (Hijab conflict) ದಿನದಿಂದ ದಿನಕ್ಕೆ ತಾರಕಕ್ಕೇರುವ ಲಕ್ಷಣಗಳು ಗೋಚರಿಸುತ್ತಿವೆ. ಹೈಕೋರ್ಟ್ (high court) ಯಾರೂ ಕೂಡ ಕಾಲೇಜುಗಳಿಗೆ ಹಿಜಬ್ ಆಗಲೀ, ಕೇಸರಿ ಶಾಲನ್ನಾಗಲಿ (Saffron shawl) ಧರಿಸಿ ಬರುವಂತಿಲ್ಲ ಎಂಬ ಮದ್ಯಂತರ ತೀರ್ಪಿನ ಬಳಿಕ ನಡೆಯುತ್ತಿರುವ ಹೈಡ್ರಾಮಾಗಳಿಂದ ಕಾಲೇಜಿನ ಕಡೆಗೆ ವಿದ್ಯಾರ್ಥಿಗಳು ಮುಖ ಮಾಡ್ತಿಲ್ಲ.. ಹೀಗಾಗಿ ರಾಯಚೂರು ಜಿಲ್ಲೆಯ ಬಹುತೇಕ ಕಾಲೇಜುಗಳು ಬಿಕೋ ಎನ್ನುತ್ತಿವೆ. 590 ವಿದ್ಯಾರ್ಥಿಗಳಿರುವ ಕಾಲೇಜಿಗೆ ಒಬ್ಬಳೇ ಹಾಜರ್ , ವಿದ್ಯಾರ್ಥಿಗಳಿಲ್ಲದೇ ಪಾಠ ಪಠ್ಯಗಳು ಸ್ಥಗಿತಗೊಂಡಿದೆ. ಹಿಜಬ್ ಗಲಾಟೆ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ಪೋಷಕರು ಭಯಭೀತರಾಗಿ ಕಾಲೇಜಿಗೆ ಮಕ್ಕಳನ್ನ ಕಳಿಸುತ್ತಿಲ್ಲ. ಇದ್ರಿಂದಾಗಿ ಮಕ್ಕಳ ಶೈಕ್ಷಣಿಕ ಬದುಕು ಕುಂಠಿತವಾಗುತ್ತಿದೆ. ರಾಯಚೂರಿನ ಹೃದಯ ಭಾಗದಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ನಿನ್ನೆಯಿಂದ ವಿದ್ಯಾರ್ಥಿಗಳೇ ಇಲ್ಲ. 590 ಹಾಜರಾತಿ ಇರುವ ಈ ಕಾಲೇಜಿನಲ್ಲಿ ಇಂದು ಕೇವಲ ಒಬ್ಬ ವಿದ್ಯಾರ್ಥಿನಿ ಮಾತ್ರ ಹಾಜರಾಗಿದ್ದಳು. 8 ಗಂಟೆಗೆ ಆರಂಭವಾಗಬೇಕಿದ್ದ ಕಾಲೇಜು 9 ಗಂಟೆಯಾದರೂ ವಿದ್ಯಾರ್ಥಿಗಳಿಲ್ಲದೇ ತರಗತಿಗಳು ಬಿಕೋ ಎನ್ನುತ್ತಿದ್ದವು. ಅಲ್ಲದೇ ಹಿಜಬ್ ಗಲಾಟೆ ಶುರುವಾದ ಬಳಿಕ ರಜೆ ನೀಡಿದ್ದರಿಂದ ಊರಿಗೆ ತೆರಳಿದ್ದ ವಿದ್ಯಾರ್ಥಿನಿ ಇಂದು ಕಾಲೇಜು ಆರಂಭವಾಗಿದೆ ಎಂದು ಬಂದು ಗೋಳಾಡುವಂತಾಯಿತು. ಇನ್ನೂ ಸಿಲಬಸ್ ಮುಗಿದಿಲ್ಲ, ಪದೇ ಪದೇ ಹೀಗಾದರೆ ನಮ್ಮ ಗತಿ ಏನು ಎಂಬ ಪ್ರಶ್ನೆಯನ್ನ ವಿದ್ಯಾರ್ಥಿನಿ ಮಾದ್ಯಗಳ ಮುಂದೆ ಅಳಲನ್ನ ತೋಡಿಕೊಂಡಳು. ಇನ್ನು ಮತ್ತೊಂದೆಡೆ ಈಗಾಗಲೇ ವಿಶ್ವ ವಿದ್ಯಾನಿಲಯದಿಂದ ಎಕ್ಸಾಂ ಫಾರ್ಮ್ (Exam Form from World University) ತುಂಬಿಕೊಳ್ಳಲು ಆದೇಶ ಬಂದಿದೆ. ಇಲ್ಲಿ ನೋಡಿದರೆ ವಿದ್ಯಾರ್ಥಿಗಳೇ ಕಾಲೇಜಿಗೆ ಬರುತ್ತಿಲ್ಲ. ಹೀಗಾಗಿ ಬೇಗ ಈ ಸಮಸ್ಯೆಯನ್ನು ಇತ್ಯರ್ಥಗೊಳಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೈಕ್ಷಣಿಕ ವ್ಯವಸ್ಥೆಗೆ ಅಣಿ ಮಾಡಿಕೊಡುವಂತೆ ಪ್ರಾಂಶುಪಾಲರು ಮನವಿ ಮಾಡಿದರು. ಹಿಜಬ್ ಬೇಕು ಎನ್ನುವ ವಿದ್ಯಾರ್ಥಿಗಳು ಒಂದೆಡೆಯಾದರೆ, ನಮ್ಮ ಶಿಕ್ಷಣ ಸರಿಯಾಗಿ ನಡೆದರೆ ಸಾಕು ಎಂದು ಮತ್ತಷ್ಟು ವಿದ್ಯಾರ್ಥಿಗಳು, ಒಟ್ಟಾರೆಯಾಗಿ ಈ ಸಮಸ್ಯೆ ಬೇಗ ಇತ್ಯರ್ಥವಾಗಿ ಮಕ್ಕಳ ಕಲಿಕೆ ಸುಗಮವಾಗಲಿ ಎಂಬುದಷ್ಟೇ ನಮ್ಮ ಆಶಯ.