Friday, November 14, 2025

Latest Posts

Shivamoggaದಲ್ಲಿ ಸೆಕ್ಷನ್ 144 26 ರ ಬೆಳಿಗ್ಗೆ 9 ಗಂಟೆ ವರೆಗೂ ವಿಸ್ತರಣೆ..!

- Advertisement -

ಶಿವಮೊಗ್ಗದಲ್ಲಿ ಬಜರಂಗದಳದ (Bajarangadala) ಕಾರ್ಯಕರ್ತರನ್ನು ಕೊಲೆ (Murder) ಮಾಡಿರುವುದಕ್ಕೆ ರಾಜ್ಯದಾದ್ಯಂತ ಪ್ರತಿಭಟನೆಗಳು (Protests) ನಡೆಯುತ್ತಿದ್ದು, ಕೊಲೆ ಬಂದಿಸಿ ಶಿಕ್ಷೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಹರ್ಷನ (harsha) ಕೊಲೆ ಯಿಂದಾಗಿ ಅಲ್ಲಿನ ಪರಿಸ್ಥಿತಿ ಬಿಗಡಾಯಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು, ಹಿಜಬ್ ವಿವಾದದಿಂದ (Hijab Controversy) ವಿಧಿಸಿದ್ದ ಸೆಕ್ಷನ್ 144 (Section 144) ಅನ್ನು 25ರವರೆಗೆ ವಿಧಿಸಿತ್ತು, ಈಗದನ್ನು 26ರ ಬೆಳಿಗ್ಗೆ 9 ಗಂಟೆ ವರೆಗೂ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಡಾ ಸೆಲ್ವಮಣಿ (District Collector Dr Selvamani) ಅವರು ಆದೇಶ ಹೊರಡಿಸಿದ್ದಾರೆ. ದೊಡ್ಡಪೇಟೆ, ಕೋಟೆ ಮತ್ತು ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪ್ರದೇಶವನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. 144 ಸೆಕ್ಷನ್ ಜಾರಿ ಇರುವವರೆಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಹರ್ಷನ ಕುಟುಂಬಕ್ಕೆ ಭದ್ರತೆ ನೀಡಲಾಗಿದ್ದು, ಇಂದು ಹರ್ಷನ ಮನೆಗೆ ತೇಜಸ್ವಿ ಸೂರ್ಯ (Tejasvi Surya) ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ವ್ಯಕ್ತಪಡಿಸಿದ್ದಾರೆ. ಇನ್ನು ಅರಸಿನ ಕೊಲೆ ಕೇಸಿಗೆ ಸಂಬಂಧಪಟ್ಟಂತೆ ಇದರ ಹಿಂದೆ ಯಾರಿದ್ದಾರೆ ಎನ್ನುವುದರ ಕುರಿತು ತನಿಖೆ ಮಾಡಲಾಗುತ್ತಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ (Home Minister Araga Gnanendra) ತಿಳಿಸಿದ್ದಾರೆ.

- Advertisement -

Latest Posts

Don't Miss