ಭ್ರಷ್ಟಾಚಾರದ (corruption) ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳ (ACB officers) 8 ತಂಡಗಳು ಬಿಬಿಎಂಪಿ ಕಚೇರಿ (BBMP Office) ಮೇಲೆ ಇಂದು ದಾಳಿ ನಡೆಸಿದೆ. ಬಿಬಿಎಂಪಿಯ ಕೇಂದ್ರ ಕಚೇರಿ, ನಗರ ಯೋಜನೆ ಕೇಂದ್ರ ಕಛೇರಿ ಹಾಗೂ ಎಲ್ಲಾ 8 ವಲಯಗಳ ಮೇಲೆ ದಾಳಿ ನಡೆಸಿ, ತೀವ್ರ ಶೋಧಕಾರ್ಯ ನಡೆಸುತ್ತಿದ್ದು ಮಾಹಿತಿಯನ್ನು ಕಲೆ ಹಾಕುತ್ತಿದೆ. ರಾಜಕಾಲುವೆ, ಜಾಹೀರಾತು (Advertising), ಆರೋಗ್ಯ ವಿಭಾಗಗಳ ಮೇಲೆ ಎಸಿಬಿ ಮುಖ್ಯಸ್ಥ ಸೀಮಂತ್ ಕುಮಾರ್ ಸಿಂಗ್ (ACB chief Seemant Kumar Singh) ನೇತೃತ್ವದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ನಾಲ್ವರು ಎಸ್ಪಿ ಗಳು(sp), ಡಿವೈಎಸ್ಪಿ(dysp) ಗಳು, ಇನ್ಸ್ ಪೆಕ್ಟರ್ ಗಳು ಸೇರಿ ಇನ್ನೂರಕ್ಕೂ ಹೆಚ್ಚು ಸಿಬ್ಬಂದಿ ಸಾರ್ವಜನಿಕರ ಸೋಗಿನಲ್ಲಿ ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಈ ಹಿಂದೆ ಬಿಬಿಎಂಪಿ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಬ್ರೋಕರ್ ಗಳ ಜೊತೆ ಸೇರಿ ಸರ್ಕಾರಿ ಆಸ್ತಿಗಳ ಮೇಲೆ ಗೋಲ್ಮಾಲ್ ನಡೆದಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡು ಎಸಿಬಿ ದಾಳಿ ನಡೆಸಿದೆ.

