ಸ್ಯಾಂಡಲ್ವುಡ್ನ ಟಗರುಪುಟ್ಟಿ ಐಸೂ ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಪುಟಾಣಿ ಪುಟ್ಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಮೂಲ್ಯ ಈಗ ತಾಯಿಯಾಗಿದ್ದಾರೆ. ವಿಶೇಷ ಅಂದ್ರೆ ಅಮೂಲ್ಯ ಮಡಿಲನ್ನು ಅವಳಿ ಮಕ್ಕಳು ಅಲಂಕರಿಸಿದ್ದಾರೆ. ಶುಭದಿನವಾದ ಮಹಾಶಿವರಾತ್ರಿಗೆ ಜಯನಗರದ ಕ್ಲೌಡ್ನೈನ್ ಆಸ್ಪತ್ರೆಯಲ್ಲಿ ಅಮೂಲ್ಯ ಎರಡು ಮುದ್ದಾದ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
೨೦೧೭ರಲ್ಲಿ ರಾಜರಾಜೇಶ್ವರಿ ನಗರದ ರಾಜಕೀಯ ಮುಖಂಡ ರಾಮಚಂದ್ರೇಗೌಡರ ಪುತ್ರ ಜಗದೀಶ್ರನ್ನು ವಿವಾಹವಾದ ಅಮೂಲ್ಯ ಮದುವೆಯ ನಂತರ ಸಿನಿಮಾಗಳಿಂದ ದೂರವೇ ಉಳಿದಿದ್ದರು. ಮುಗುಳುನಗೆ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ನಲ್ಲಿ ಕಾಣಿಸಿಕೊಂಡ ನಂತರ ಅಮೂಲ್ಯ ಸೋಷಿಯಲ್ ವರ್ಕ್ ಮಾಡುವ ಮೂಲಕ ಪತಿ ಜಗದೀಶ್ ಹಾಗು ಮಾವ ರಾಮಚಂದ್ರೇಗೌಡರ ಜೊತೆ ನಿಂತಿದ್ರು. ಚಿತ್ರರಂಗದಲ್ಲಿ ಕೆಲವು ವರ್ಷ ಬಾಲನಟಿಯಾಗಿ ನಂತರ ೧೦ ವರ್ಷ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ಅಮೂಲ್ಯ ಸಿನಿಮಾದಿಂದ ದೂರವಾಗಿದ್ರೂ ಅಭಿಮಾನಿ ಬಳಗವನ್ನು ಸೃಷ್ಟಿಮಾಡಿಕೊಂಡಿದ್ದ ನಟಿ
ಈಗ ಅಮೂಲ್ಯ ತಾಯಿಯಾಗಿರೋದು ಅಭಿಮಾನಿಗಳಿಗೂ ಈ ಸುದ್ದಿ ಸಂಭ್ರಮದ ವಿಷಯವಾಗಿದ್ದು, ಆದರೆ ಮತ್ತೆ ಅಮೂಲ್ಯ ಸಿನಿಮಾಗೆ ಬರಲಿ ಅನ್ನೋ ಆಶಯ ಅಭಿಮಾನಿಗಳಿಗಿದೆ. ಮಗುವಿನ ಕಾಳಜಿಯ ಜೊತೆ ಜೊತೆಗೆ ಅಮೂಲ್ಯ ಸಿನಿಮಾದಲ್ಲಿ ನಟಿಸ್ತಾರಾ..? ಅಥವಾ ತಮ್ಮ ಕುಟುಂಬಕ್ಕೆ ರಾಜಕೀಯ ಹಿನ್ನೆಲೆ ಇರೋದ್ರಿಂದ ರಾಜಕೀಯದ ಕಡೆಗೆ ಹೊರಳ್ತಾರಾ ಗೊತ್ತಿಲ್ಲ. ಸದ್ಯ ಅವಳಿ ಮಕ್ಕಳ ತಾಯಿಯಾಗಿ ತಾಯ್ತನದ ಸವಿ ಅನುಭವಿಸ್ತಿರೋ ಅಮೂಲ್ಯಗೆ ನಮ್ಮ ಕಡೆಯಿಂದಲೂ ಶುಭಾಷಯ
ಶಿವರಾತ್ರಿ ದಿನವೇ ತಾಯಿಯಾದ ಐಸೂ ಅಮೂಲ್ಯಗೆ ಅವಳಿ ಗಂಡುಮಕ್ಕಳು
- Advertisement -
- Advertisement -