ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಬೆಸ್ತರಪೇಟೆ ಟೈಲರ್ ಅಸೋಸಿಯೇಷನ್ ಕಛೇರಿಯಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಹಾಗೂ ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ದೊಡ್ಡಬಳ್ಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಿನ್ನೆ ಟೈಲರ್ ದಿನಾಚರಣೆಯನ್ನು ಆಚರಿಸಲಾಯಿತು, ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಅಸಂಘಟಿತ ವಲಯದವರಿಗೆ ಇ- ಶ್ರಮ್ ಕಾರ್ಡ್ ಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಸುಧಾ ವಿತರಣೆ ಮಾಡಿದರು. ನಂತರ ಮಾತನಾಡಿದ ಯೋಜನಾಧಿಕಾರಿ ಸುಧಾ ತಾಲೂಕಿನಲ್ಲಿ ಸುಮಾರು ಹನ್ನೊಂದು ಸಾವಿರ ಇ- ಶ್ರಮ್ ಕಾರ್ಡ್ ಗಳನ್ನು ನೋಂದಣಿ ಮಾಡಲಾಗಿದೆ ಅಸಂಘಟಿತ ವಲಯದ ಏಳಿಗೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಹಕಾರವನ್ನು ನೀಡುತ್ತದೆ ಹಾಗೂ ಅಸಂಘಟಿತ ವಲಯದಲ್ಲಿ ಅಂಗವಿಕಲರನ್ನು ಗುರುತಿಸಿ ವೀಲ್ ಚೇರ್ ಗಳನ್ನು ಸಂಸ್ಥೆಯ ಮೂಲಕ ನೀಡಲಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ದೊಡ್ಡಬಳ್ಳಾಪುರ ತಾಲ್ಲೂಕಿನ ಯೋಜನಾಧಿಕಾರಿ ಸುಧಾ ಮಾತನಾಡಿದರು. ನಂತರ ಟೈಲರ್ ಸಂಘದ ಉಪಾಧ್ಯಕ್ಷ ಬಚ್ಚೇಗೌಡ ಮಾತನಾಡಿ ಟೈಲರ್ ಕೆಲಸ ಮಾಡುವವರನ್ನು ಅಸಂಘಟಿತ ವಲಯ ಎಂದು ಗುರುತಿಸಿದ್ದು ನಮಗೆ ಸಂತೋಷ ಇದೆ, ಇದರಿಂದಾಗಿ ನಮ್ಮ ಮನೆಯ ಮಕ್ಕಳಿಗೆ ಶಾಲೆಯಲ್ಲಿ ಕಾಲರ್ಶೀಪ್ ಸಿಗುವಂತಾಗಿದೆ ಎಂದು ಟೈಲರ್ ಸಂಘದ ಉಪಾಧ್ಯಕ್ಷ ಬಚ್ಚೇಗೌಡ ಮಾತನಾಡಿದರು. ಕಾರ್ಯಕ್ರಮದ ಟೈಲರ್ ಅಸೋಸಿಯೇಷನ್ ಪದಾಧಿಕಾರಿಗಳು ಟೈಲರ್ ಸಂಘದ ಎಲ್ಲಾ ಸದಸ್ಯರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಸಬಾ ಹೋಬಳಿಯ ಸೇವಾ ಪ್ರತಿನಿಧಿ ,ಹಾಗೂ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಭಿಜಿತ್, ಕರ್ನಾಟಕ ಟಿವಿ, ದೊಡ್ಡಬಳ್ಳಾಪುರ.

