Wednesday, April 23, 2025

Latest Posts

ಗಡಿ ದಾಟುವಾಗ ಸಿಕ್ಕಿಬಿದ್ದ ವ್ಯಕ್ತಿ: ಆತನ ಬಟ್ಟೆಯೊಳಗೆ ಏನೇನಿತ್ತು ಗೊತ್ತಾ..?

- Advertisement -

ಈಗಾಗಲೇ ನಾವು ಉಕ್ರೇನ್- ರಷ್ಯಾ ಯುದ್ಧದ ಸಮಯದಲ್ಲಿ ಏನೇನಾಗುತ್ತಿದೆ. ಗಡಿ ದಾಟುವಾಗ ಎಂಥೆಂಥ ಘಟನೆ ಜರುಗಿದೆ ಅನ್ನೋ ಬಗ್ಗೆ ಮಾಹಿತಿ ನೀಡಿದ್ದೇವೆ. ಆದ್ರೆ ಇಲ್ಲೋರ್ವ ವ್ಯಕ್ತಿ ಕ್ಯಾಲಿಫೋರ್ನಿಯಾದಿಂದ ಅಮೇರಿಕಾ ಗಡಿ ದಾಟಬೇಕಾದರೆ, ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಯಾಕಂದ್ರೆ ಅವನು ತನ್ನ ಬಟ್ಟೆಯಲ್ಲಿ ಕೆಲ ವಸ್ತುಗಳನ್ನ ಇಟ್ಟುಕೊಂಡಿದ್ದ. ಆ ವಸ್ತುಗಳು ಯಾವುದು ಅಂದ್ರೆ, ಹಲ್ಲಿ ಮತ್ತು ಹಾವು.

ಹೌದು 52 ಹಲ್ಲಿ ಮತ್ತು ಹಾವುಗಳನ್ನ ತನ್ನ ಬಟ್ಟೆಯಲ್ಲಿ ಅಡಗಿಸಿಕೊಂಡು, ಟ್ರಕ್ ಮೂಲಕ ಆ ವ್ಯಕ್ತಿ ಕ್ಯಾಲಿಫೋರ್ನಿಯಾದಿಂದ ಯುಎಸ್ ಗಡಿ ದಾಟಲು ಯತ್ನಿಸಿದ್ದ. ಆದರೆ ಗಾಡಿ ನಿಲ್ಲಿಸಿ, ಗಾಡಿಯಲ್ಲಿ ಸರ್ಚ್ ಮಾಡಿದಾಗ, ಪೊಲೀಸರಿಗೆ ಏನೂ ಸಿಗಲಿಲ್ಲ. ಹೆಚ್ಚಿನ ತಪಾಸಣೆಗಾಗಿ ಅವನ ಬಟ್ಟೆಯನ್ನು ಎಳೆದಾಡಿದಾಗ, ಹಲ್ಲಿ ಮತ್ತು ಹಾವನ್ನು ಕದ್ದು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. 9 ಹಾವುಗಳನ್ನು ಮತ್ತು 52 ವಿಚಿತ್ರ ಜಾತಿಯ ಹಲ್ಲಿಗಳನ್ನು ಆತ ಸಾಗಿಸುತ್ತಿದ್ದ.

ಆತ ಮೈತುಂಬ ಬಟ್ಟೆ ಹಾಕಿದ್ದು. ಜಾಕೆಟ್ನಲ್ಲಿ , ಪ್ಯಾಂಟ್‌ ಶರ್ಟ್‌ನ ಭಾಗದಲ್ಲಿ ಸಣ್ಣ ಸಣ್ಣ ಪಾಕೆಟ್‌ಗಳಲ್ಲಿ ಹಾವು, ಹಲ್ಲಿಗಳನ್ನು ತುಂಬಿಸಿಕೊಂಡಿದ್ದ ಎಂದು ಸ್ಥಳೀಯ ಪೊಲೀಸರು ಹೇಳಿಕೆ ನೀಡಿದ್ದಾರೆ. ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಿತ್ರ ಹಲ್ಲಿ ಮತ್ತು ವಿಷಭರಿತ ಹಾವುಗಳು ಕೋಟಿಗಟ್ಟಲೇ ದುಡ್ಡಿಗೆ ವ್ಯಾಪಾರವಾಗುವ ಕಾರಣಕ್ಕೆ, ಈ ರೀತಿ ಕದ್ದು ಮುಚ್ಚಿ ಮಾರಾಟ ಮಾಡಲಾಗುತ್ತದೆ.

- Advertisement -

Latest Posts

Don't Miss