ಚಳ್ಲಕೆರೆ : ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದು ಚಳ್ಳಕೆರೆ ತಹಶಿಲ್ದಾರ್ ಎನ್ ರಘುಮೂರ್ತಿ (Challakere Tahsildar N. Raghumurthy)ರೇಡ್ ಮಾಡಿ ಲಾರಿಯ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಾರೆ ಎನ್ನುವ ಮಾಹಿತಿ ಮೇರೆಗೆ ಮಧ್ಯರಾತ್ರಿ 1 ಗಂಟೆ ಸಮಯದ ವೇಳೆಗೆ ಬಳ್ಳಾರಿ ಮತ್ತು ಚಿತ್ರದುರ್ಗ ರಸ್ತೆಯ (Bellary and Chitradurga Road) ಮೂಲಕ ತುಮಕೂರು (Tumkur) ಕಡೆಗೆ ಹೋಗುತ್ತಿದ್ದ ಲಾರಿಯನ್ನು ನಗರದ ನೆಹರು ವೃತ್ತದಲ್ಲಿ ತಡೆದು ಪರಿಶೀಲಿಸಲಾಗಿದ್ದು ಲಾರಿಯಲ್ಲಿ ಸುಮಾರು 10 ಟನ್ ಪಡಿತರ ಅಕ್ಕಿ ಅಂದಾಜು ಐದು ಲಕ್ಷ ರೂಪಾಯಿ ಮೌಲ್ಯದ ದಾಸ್ತಾನನ್ನು ವಶಕ್ಕೆ ಪಡೆದು, ಯಾವುದೇ ಪರವನಾಗಿ ಇಲ್ಲದೆ ಸಾಗಾಟ ಮಾಡುತ್ತಿದ್ದ ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದು ಚಾಲಕನ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ. ಹಾಗೆ ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಾಶೀಲ್ದಾರ್ ಎನ್.ರಘುಮೂರ್ತಿ ಇನ್ನು ಮುಂದೆ ಪಡಿತರ ಹಕ್ಕಿ ಯನ್ನು ಕಾಳಸಂತೆಯಲ್ಲಿ ಮಾರುವುದಾಗಲಿ ದಾಸ್ತಾನು ಇಡುವುದಾಗಲಿ, ಅಕ್ರಮವಾಗಿ ಸಾಗಾಣಿಕೆ ಮಾಡುವುದು ಮಹಾಪರಾಧ ವಾಗಿರುತ್ತದೆ. ಬಡವರು ನಿರ್ಗತಿಕರು ತಿನ್ನುವಂತ ಅಕ್ಕಿಯನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುವವರ ಮೇಲೆ ಹದ್ದಿನ ಕಣ್ಣಿಡಲಾಗುವುದು. ಇನ್ನು ಮುಂದೆ ಯಾರೂ ಕೂಡ ಇಂತಹ ದುಷ್ಕೃತ್ಯಕ್ಕೆ ಕೈಹಾಕಬಾರದು ಈ ಮಾರ್ಗದಲ್ಲಿ 24 ಗಂಟೆ ಸಹ ಕಂದಾಯ ಇಲಾಖೆ ಮತ್ತು ಆಹಾರ ಸಿಬ್ಬಂದಿಯು (Revenue Department and Food Staff) ತಪಾಸಣೆ ಮಾಡಲಿದ್ದು ಅನುಮಾನಾಸ್ಪದವಾಗಿ ಕಂಡುಬಂದಂತಹ ವಾಹನಗಳನ್ನು ಪರಿಶೀಲನೆ ಮಾಡಲಾಗುವುದು ಮತ್ತು ಈ ಕೃತ್ಯದಲ್ಲಿ ಭಾಗಿಯಾಗುವ ಆರೋಪಿಗಳಿಗೆ ಕಠಿಣವಾದ ಶಿಕ್ಷೆಗೆ ಶಿಫಾರಸು ಮಾಡಲಾಗುವುದು.
ಆಂಜನೇಯ,ಕರ್ನಾಟಕ ಟಿವಿ,ಚಿತ್ರದುರ್ಗ.
ಆಂಜನೇಯ,ಕರ್ನಾಟಕ ಟಿವಿ,ಚಿತ್ರದುರ್ಗ.