Friday, November 22, 2024

Latest Posts

Doddaballapura : 600 ವರ್ಷಗಳ ಇತಿಹಾಸ ಪ್ರಸಿದ್ಧಿ ಹೊಂದಿದೆ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ..!

- Advertisement -

ದೊಡ್ಡಬಳ್ಳಾಪುರ : 600 ವರ್ಷಗಳ ಇತಿಹಾಸ ಪ್ರಸಿದ್ಧಿಯನ್ನು ಪಡೆದಿರುವ ದೇವಸ್ಥಾನವೆಂದರೆ ಅದು ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ (Shree Kshetra Ghati Subramanya Swamy) ದೇವಸ್ಥಾನ. ಈ ದೇವಸ್ಥಾನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿದೆ. ಈ ದೇವಸ್ಥಾನಕ್ಕೆ ಭಕ್ತಾದಿಗಳು ಮಂಗಳವಾರ ಹಾಗೂ ಭಾನುವಾರ ಅತಿಹೆಚ್ಚಿನ ಸಂಖ್ಯೆಯಲ್ಲಿಆಗಮಿಸಿ ದೇವರ ದರ್ಶನವನ್ನು ಪಡೆಯುತ್ತಾರೆ. ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಪೂರ್ವಾಭಿಮುಖಿವಾಗಿ ಏಳು ಹೆಡೆಗಳ ಸರ್ಪ ಸ್ವರೂಪದಲ್ಲಿ, ಪಶ್ಚಿಮಾಭಿ ಮುಖವಾಗಿ ಲಕ್ಷ್ಮಿಸಮೇತವಾಗಿ ನರಸಿಂಹಸ್ವಾಮಿ (Lakshmi Narasimhaswamy) ಏಕದೇಹನ್ಯ ಆಗಿರುವುದು ಈ ಕ್ಷೇತ್ರದ ವಿಶೇಷತೆಯಾಗಿದೆ. ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ವಾರ್ಷಿಕ 8 ಕೋಟಿ ಆದಾಯ ಹೋಂದಿದೆ. ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಭಕ್ತಿಯಿಂದ ಬೇಡಿಕೊಳ್ಳುವ ಭಕ್ತರ ಬೇಡಿಕೆಯನ್ನು ಈಡೇರಿಸುವ ಕರುಣಾಮಯಿ, ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಚರ್ಮ ರೋಗ ಹಾಗೂ ಕಂಕಣ ಭಾಗ್ಯ ಸಮಸ್ಯೆಗೆ ಇಲ್ಲಿ ಪರಿಹಾರ ಷಷ್ಠಿಯಂದು (sashti) ನಡೆಯುವ ಪೂಜೆ ವಿಶೇಷವಾಗಿರುತ್ತದೆ. ಮಂಗಳವಾರ, ಭಾನುವಾರ ಆರು ಸಾವಿರಕ್ಕೂ ಹೆಚ್ಚು ಭಕ್ತರು ಈ ದೇವಾಲಯಕ್ಕೆ ಆಗಮಿಸುತ್ತಾರೆ. ಬೆಳಿಗ್ಗೆ ತಿಂಡಿ ಹಾಗೂ ಮದ್ಯಾನ ಊಟದ ವ್ಯವಸ್ಥೆ ನಿರಂತರವಾಗಿತ್ತದೆ.

https://www.youtube.com/watch?v=sjO3W2w4NJs
- Advertisement -

Latest Posts

Don't Miss