ಹಲವು ಸಿನಿಮಾಗಳು ಸಿಕ್ಕಾಪಟ್ಟೆ ಪ್ರಚಾರ ಮಾಡಿ, ನ್ಯೂಸ್ ಚಾನೆಲ್ಗಳಲ್ಲಿ ನ್ಯೂಸ್ಗಳನ್ನ ಹಾಕಿಸಿ, ಪೋಸ್ಟರ್ ಅಂಟಿಸಿ, ರಿಯಾಲಿಟಿ ಶೋಗೆ ಬಂದು ಪ್ರಮೋಷನ್ ಮಾಡಿದ್ರೂ, ತೋಪು ಹೊಡೆಯುತ್ತೆ. ಅದಕ್ಕೆ ಕಾರಣ, ಚಿತ್ರದಲ್ಲಿರುವ ಕಥೆ ಪ್ರೇಕ್ಷಕರ ಗಮನ ಸೆಳೆದಿರುವುದಿಲ್ಲ. ಆದ್ರೆ ದಿ ಕಶ್ಮೀರಿ ಫೈಲ್ಸ್ ಎಂಬ ಚಿತ್ರ ಬಿಡುಗಡೆಯಾಗಿದೆ. ಗಟ್ಟಿ ಗುಂಡಿಗೆ ಇದ್ದವರು ಈ ಸಿನಿಮಾವನ್ನ ನೋಡಿ ಎಂದು ಪ್ರಮೋಷನ್ ಮಾಡಿದ್ದು, ಆ ಸಿನಿಮಾದ ಡೈರೆಕ್ಟ್ರೋ ಅಥವಾ ನಿರ್ಮಾಪಕರೋ ಅಲ್ಲಾ. ಬದಲಾಗಿ ಜನರು.
ಈ ಸಿನಿಮಾವನ್ನ ನೋಡಿದ ಜನ, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಿ ಪಡಿಸಿದ್ದ ಕಾರಣಕ್ಕೆ, ಇಂದು ದಿ ಕಶ್ಮೀರಿ ಫೈಲ್ಸ್ ನೋಡಬೇಕು ಅನ್ನೋದು ಹಲವು ಜನರ ಹಂಬಲವಾಗಿದೆ. ಸಿನಿಮಾ ರಿಲೀಸ್ ಆಗಿ ಒಂದು ವಾರ ಕಳೆದ್ರೂ, ಇಂದಿಗೂ ಟಿಕೇಟ್ ಸಿಗದೇ, ಥಿಯೇಟರ್ ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ. ಸಾಮಾನ್ಯ ಜನರಿಂದ ಹಿಡಿದು, ಸೆಲೆಬ್ರಿಟಿಗಳು, ರಾಜಕಾರಣಿಗಳೆಲ್ಲ ಸಿನಿಮಾ ನೋಡಿ ಭೇಷ್ ಎಂದು ಹೇಳಿದ್ದಾರೆ. ಹೀಗೆ ಪ್ರಚಾರವಿಲ್ಲದೇ ಫೇಮಸ್ ಆದ ಸಿನಿಮಾ ಒಂದು ವಾರದಲ್ಲಿ 75 ಕೋಟಿ ಬಾಚಿದೆ ಅಂದ್ರೆ ನೀವು ನಂಬಲೇಬೇಕು.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ, ಕಶ್ಮೀರಿ ಪಂಡಿತರ ಜೀವನ ಹೇಗಿತ್ತು, ಹೇಗಾಯ್ತು ಎಂಬುದರ ಚಿತ್ರಣವನ್ನ ತೋರಿಸುತ್ತದೆ. ಅವರು ಪಟ್ಟ ಕಷ್ಟದ ಬಗ್ಗೆ ವಿವೇಕ್, ವಿವರವಾಗಿ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಚಿತ್ರತಂಡ ಟ್ವೀಟ್ ಮಾಡಿತ್ತು. ಮೊದಲ ದಿನ 3ವರೆ ಕೋಟಿ, ಎರಡನೇಯ ದಿನ 8ವರೆ ಕೋಟಿ, ಮೂರನೇಯ ದಿನ 15ವರೆ ಕೋಟಿ ಗಳಿಸಿದ್ದು, ಇಂದಿಗೆ 75 ಕೋಟಿಯ ಗಡಿ ದಾಟಿದೆ. ಇನ್ನೇನು ಕೆಲವೇ ದಿನಗಳಲ್ಲಿ 100 ಕೋಟಿ ಗಳಿಸಲಿದೆ ಎಂದು ಅಂದಾಜು ಮಾಡಲಾಗಿದೆ.




