ಮುಂಬೈ:ಐಪಿಎಲ್‍ನ 17ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಚೆನೈ ಸೂಪರ್ ಕಿಂಗ್ಸ್ ಹಾಗೂ ಸನ್‍ರೈಸರ್ಸ್ ನಡುವೆ ಕದನ ನಡೆಯಲಿದೆ. ಉಭಯ ತಂಡಗಳ ನಡುವಿನ ಕದನ ಹೈವೋಲ್ಟೇಜ್ ಕದನ ಆಗಿದೆ.
ಅಚ್ಚರಿ ಎಂಬಂತೆ ಐಪಿಎಲ್‍ನಲ್ಲಿ ಎರಡೂ ತಂಡಗಳು ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿವೆ.ಆದರೆ ಈ ಬಾರಿ ಎರಡೂ ತಂಡಗಳು ಗೆಲುವಿನ ಖಾತೆಯನ್ನು ತೆರೆದಿಲ್ಲ. ರವೀಂದ್ರ ಜಡೇಜಾ ನೇತೃತ್ವದ ಸಿಎಸ್‍ಕೆ ಈ ಪಂದ್ಯ ಪ್ರತಿಷ್ಠೆಯ ಪಂದ್ಯವಾಗಿದ್ದು ಮಾನ ಉಳಿಸಿಕೊಳ್ಳಲು ಇಂದು ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ.ಕೋಲ್ಕತ್ತಾ ವಿರುದ್ದ ಸೋತಿದ್ದ ಚೆನ್ನೈ ನಂತರ ಪಂಜಾಬ್ ವಿರುದ್ದವೂ ಸೋತು ನಿರಾಸೆ ಅನುಭವಿಸಿತ್ತು.
ಇನ್ನು ಸನ್‍ರೈಸರ್ಸ್ ತಂಡ ಆಡಿದ ಎರಡೂ ಪಂದ್ಯಗಳನ್ನು ಕೈಚೆಲ್ಲಿದೆ. ಮೊದಲಿಗೆ ರಾಜಸ್ಥಾನ ವಿರುದ್ಧ ಸೋತಿದ್ದ ನಂತರ ಲಕ್ನೊ ವಿರುದ್ಧ 12 ರನ್‍ಗಳ ವಿರೋಚಿತ ಸೋಲು ಅನುಭವಿಸಿತ್ತು. ಇಂದಿನ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆ ಹ್ಯಾಟ್ರಿಕ್ ಸೋಲಿನಿಂದ ಪಾರಾಗಬೇಕಿದೆ. ಎರಡು ತಂಡಗಳ ಬಲಾಬಲ ನೊಡಿದರೆ ಚೆನ್ನೈ ತಂಡ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ವೇಗಿಗಳಿಗೆ ಹಾಗೂ ಸ್ಪಿನ್ನರ್ಸ್‍ಗಳಿಗೆ ನೆರವು ನೀಡಲಿದೆ. ಪವರ್‍ಪ್ಲೇನಲ್ಲಿ ಬ್ಯಾಟ್ಸ್‍ಮನಗಳಿಗೆ ನೆರವು ನೀಡಲಿದೆ. ಟಾಸ್ ನಿರ್ಣಾಯಕ ಪಾತ್ರವಹಿಸಲಿದೆ. ಟಾಸ್ ಗೆದ್ದ ನಾಯಕ ಬ್ಯಾಟಿಂಗ್ ಆಯ್ಕೆಮಾಡಿಕೊಳ್ಳೋದು ತಂಡಕ್ಕೆ ನೆರವಾಗಲಿದೆ.
ಸಂಭಾವ್ಯ ತಂಡ:
ಚೆನ್ನೈ ತಂಡ: ಋತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ಅಂಬಾಟಿ ರಾಯ್ಡು, ರವೀಂದ್ರ ಜಡೇಜಾ, ಶಿವಂ ದುಬೆ, ಎಂ.ಎಸ್.ಧೋನಿ, ಡ್ವೇನ್ ಪ್ರೆಟೊರಿಯಸ್, ಕ್ರಿಸ್ ಜೋರ್ಡನ್, ಡ್ವೇನ್ ಬ್ರಾವೋ.
ಸನ್‍ರೈಸರ್ಸ್ ತಂಡ: ರಾಹುಲ್ ತ್ರಿಪಾಠಿ, ಕೇನ್ ವಿಲಿಯಮ್ಸನ್, ಏಡಿನ್ ಮಾರ್ಕ್‍ರಾಮ್, ನಿಕೊಲೊಸ್ ಪೂರಾನ್,ಅಭಿಷೇಕ್ ಶರ್ಮಾ, ಅಬ್ದುಲ್ ಸಮಾದ್, ರೊಮಾರಿಯೊ ಶೆಪಾರ್ಡ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಟಿ.ನಟರಾಜನ್.