Sunday, February 9, 2025

Latest Posts

ಮೊಣಕಾಲಿನಲ್ಲಿಯೇ ಮೆಟ್ಟಿಲು ಹತ್ತಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಟೀಂ ಇಂಡಿಯಾ ಕ್ರಿಕೇಟಿಗ

- Advertisement -

Sports News: ಟೀಂ ಇಂಡಿಯಾ ಕ್ರಿಕೇಟಿಗ ನಿತೀಶ್ ಕುಮಾರ್ ರೆಡ್ಡಿ, ಮೊಣಕಾಲಿನಲ್ಲಿ ಮೆಟ್ಟಿಲು ಹತ್ತಿ, ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಇವರ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಮುಗಿಸಿ ಬಂದಿದ್ದ ನಿತೀಶ್, ಕುಟುಂಬಸ್ಥರೊಟ್ಟಿಗೆ ತಿರುಮಲಕ್ಕೆ ಭೇಟಿ ಕೊಟ್ಟು, ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಬೆಟ್ಟ ಏರಿದ ಬಳಿಕ, ಮೆಟ್ಟಿಲು ಶುರುವಾಗುತ್ತದೆ. ಈ ಮೆಟ್ಟಿಲ ಮೇಲೆ ಹಲವರು ಮೊಣಕಾಲೂರಿ ಹತ್ತಿ, ತಿರುಪತಿ ತಿಮ್ಮಪ್ಪನ ದರ್ಶನ ಮಾಡುತ್ತಾರೆ. ನಟಿ ಜಾನ್ಹವಿ ಕಪೂರ್ ಕೂಡ ಇದೇ ರೀತಿ ಮೊಣಕಾಲೂರಿ ದೇವರ ದರ್ಶನ ಮಾಡಿದ್ದು ಉಂಟು.

ಇದೀಗ ಕ್ರಿಕೇಟಿಗ ನಿತೀಶ್ ಕೂಡ ಇದೇ ರೀತಿ ಮೊಣಕಾಲೂರಿ ಮೆಟ್ಟಿಲು ಹತ್ತಿ, ದೇವರ ದರ್ಶನ ಮಾಡಿದ್ದಾರೆ. ಸಾಮಾನ್ಯವಾಗಿ ಹರಕೆ ಹೊತ್ತಾಗ, ಅಥವಾ ದೇವರಿಗೆ ಒಂದು ಸೇವೆ ಅರ್ಪಿಸಬೇಕು ಎಂದಾಗ, ಈ ರೀತಿ ಮೆಟ್ಟಿಲು ಹತ್ತಲಾಗುತ್ತದೆ.

- Advertisement -

Latest Posts

Don't Miss