Sports News: ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಇಬ್ಬರೂ ಮಕ್ಕಳೊಂದಿಗೆ ಪ್ರೇಮಾನಂದ್ ಗುರೂಜಿ ಅವರನ್ನು ಭೇಟಿಯಾಗಿದ್ದಾರೆ.
ಉತ್ತರಪ್ರದೇಶದ ವೃಂದಾವನದಲ್ಲಿ ಪ್ರೇಮಾನಂದ್ ಗುರೂಜಿ ಆಶ್ರಮವಿದ್ದು, ಇಲ್ಲಿ ಗುರೂಜಿ ಪ್ರವಚನ ಹೇಳುತ್ತಾರೆ. ಗುರೂಜಿಯ ಹಲವು ಭಕ್ತರು ಇಲ್ಲಿ ಬಂದು, ತಮ್ಮ ಪರಿಸ್ಥಿತಿಗಳನ್ನು ಹೇಳಿ, ಪರಿಹಾರ ಕೇಳಿಕೊಂಡು ಹೋಗುತ್ತಾರೆ. ಅದೇ ರೀತಿ ಅನುಷ್ಕಾ ಮತ್ತು ವಿರಾಟ್ ಕೂಡ ಗುರೂಜಿಯನ್ನು ಭೇಟಿಯಾಗಿ, ಆಶೀರ್ವಾದ ಪಡೆದು, ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ತಮ್ಮ ಜೀವನದ ಬಗ್ಗೆ ಕೆಲ ಗೊಂದಲಗಳನ್ನು ಹೇಳಕೊಂಡಿದ್ದಾರೆ. ಇವರ ಜೀವನದ ಗೊಂದಲಗಳ ಬಗ್ಗೆ ಕೇಳಿದ ಗುರೂಜಿ, ಕೆಲ ಸಲಹೆಗಳನ್ನು ಹೇಳಿದ್ದಾರೆ.
ಉತ್ತುಂಗದಲ್ಲಿದ್ದರೂ, ಆಧ್ಯಾತ್ಮದತ್ತ ಮುಖ ಮಾಡಿರುವುದು ತುಂಬಾ ಉತ್ತಮ ವಿಷಯ. ಇನ್ನು ಕ್ರಿಕೇಟ್ ಕೂಡ ಒಂದು ಆಧ್ಯಾತ್ಮಿಕ ಅಭ್ಯಾಸ. ಅಭ್ಯಾಸ ನಡೆಸುವುದನ್ನು ಎಂದಿಗೂ ಬಿಡಬಾರದು. ಅಭ್ಯಾಸದತ್ತ ಹೆಚ್ಚಿನ ಗಮನ ಹರಿಸಬೇಕು. ಇದರಿಂದ ನಿಮಗೇನು ಬೇಕೋ, ಅದನ್ನು ನೀವು ಸಾಧಿಸಬಹುದು ಎಂದು ಗುರೂಜಿ ಹೇಳಿದರು.
ಅಲ್ಲದೇ, ಅಭ್ಯಾಸ ಬಲಪಡಿಸುವುದು ನಿಮ್ಮ ಕರ್ತವ್ಯ. ನಿಮ್ಮ ಆಟದಿಂದ ಇಡೀ ಭಾರತವೇ ಖುಷಿ ಪಡುತ್ತದೆ. ಅಭ್ಯಾಸದ ಜೊತೆ, ದೇವರಲ್ಲಿ ನಂಬಿಕೆ, ಸ್ಮರಣೆ ಇರಲಿ ಎಂದು ಪ್ರೇಮಾನಂದ್ ಗುರೂಜಿ ತಿಳಿಸಿದ್ದಾರೆ.