ಬೆಕ್ಕನ್ನ ಸಾಕೋಕ್ಕೆ ಯಾರು ತಾನೇ ಇಷ್ಟಪಡಲ್ಲಾ ಹೇಳಿ..? ತನ್ನ ಮುಗ್ಧತೆ ಮತ್ತು ಕ್ಯೂಟ್ನೆಸ್ನಿಂದ ಜನರ ಮನಸ್ಸನ್ನ ಗೆಲ್ಲುವ ಈ ಮುದ್ದು ಪ್ರಾಣಿ, ಮಕ್ಕಳಂತೆ ಆಟ ಆಡಿಯೇ, ಟೆನ್ಶನ್ ದೂರ ಮಾಡತ್ತೆ. ಇಂಥ ಕ್ಯೂಟ್ ಪ್ರಾಣಿಗಳಲ್ಲಿ ಹಲವು ವಿಧಗಳಿದೆ. ಹಾಗಾಗಿ ಇಂದು ನಾವು ಪ್ರಪಂಚದಲ್ಲಿರುವ ಅಪರೂಪದ ಬೆಕ್ಕುಗಳ ಬಗ್ಗೆ ತಿಳಿಯೋಣ ಬನ್ನಿ..
1.. ಸ್ಪಿಂಕ್ಸ್ ಕ್ಯಾಟ್. ಈ ಬೆಕ್ಕ ನೋಡಲು ವಿಚಿತ್ರವಾಗಿ ಕಾಣತ್ತೆ. ಯಾಕಂದ್ರೆ ಇದರ ಮೈಮೇಲೆ ಹುಡುಕಿದ್ರೂ ಒಂದು ರೋಮ ಕೂಡ ಸಿಗಲ್ಲಾ. ಇದರ ಮೈಮೇಲೆ ಕೂದಲಿಲ್ಲದ ಕಾರಣ, ಇದು ನೋಡಲು ದುಷ್ಟ ಪ್ರಾಣಿಯಂತೆ ಕಾಣತ್ತೆ. ಆದ್ರೆ ಇದು ಎಲ್ಲರೊಂದಿಗೂ ಫ್ರೆಂಡ್ಲಿಯಾಗಿ ಇರುವ ಪ್ರಾಣಿ. ನಾಯಿಗಳ ಜೊತೆ ಕೂಡ ಆಟ ಆಡುವ ಬೆಕ್ಕಾಗಿದೆ.
2.. ಓಸಿಲೋಟ್ ಕ್ಯಾಟ್. ಇದು ಥೇಟ್ ಚಿರತೆ ಮರಿಯಂತೆ ಕಾಣುತ್ತೆ. ಆದ್ರೆ ಇದು ಚಿರತೆಯ ಬಣ್ಣ ಹೊಂದಿರುವ ಬೆಕ್ಕಿನ ಮರಿಯಾಗಿದೆ. ಈ ಬೆಕ್ಕಿನ ಮರಿ ನೋಡಲು ಚಿರತೆಯಂತೆ ಕಾಣುವ ಕಾರಣಕ್ಕೆ, ಇದು ತೊಂದರೆ ನೀಡುವಂಥ ಬೆಕ್ಕು ಅಂತಾ ನಮಗೆ ಅನ್ನಿಸಬಹುದು. ಆದ್ರೆ ಇದು ಸ್ನೇಹಪರ ಜೀವಿಯಾಗಿದೆ. ವಿದೇಶದಲ್ಲಿ ಈ ತಳಿ ಬೆಕ್ಕನ್ನ ಸಾಕುತ್ತಾರೆ.
3.. ಮಂಚ್ಕಿನ್ ಕ್ಯಾಟ್. ಇದು ದೊಡ್ಡ ದೇಹದ ಸಣ್ಣ ಕಾಲುಗಳುಳ್ಳ ಬೆಕ್ಕಾಗಿದ್ದು, ಕ್ಯೂಟೆಸ್ಟ್ ಕ್ಯಾಟ್ ಎನ್ನಿಸಿಕೊಂಡಿದೆ. ಇದು ನೀವು ಸಾಕಲು ಮನೆಗೆ ತಂದ ಕೆಲ ದಿನಗಳಲ್ಲೇ, ನಿಮ್ಮೊಂದಿಗೆ ಹೊಂದಿಕೊಂಡು ಬಿಡುತ್ತದೆ. ಯಾಕಂದ್ರೆ ಇದು ಮನರಂಜನೆ ನೀಡಲು ಮತ್ತು, ತನ್ನಷ್ಟಕ್ಕೆ ತಾನು ಆಡಿಕೊಂಡು ಇರುವ ಗುಣವನ್ನು ಹೊಂದಿದೆ.
4.. ಪ್ಯಾಲೇಸ್ ಕ್ಯಾಟ್. ಪುಟ್ಟ ಹುಲಿಯಂತೆ ಕಾಣುವ ಈ ಬೆಕ್ಕು ಅತೀ ಕ್ರೂರವಾಗಿರುತ್ತದೆ. ಇದು ಕಾಡಿನಲ್ಲಿ ವಾಸಿಸುವ ಪ್ರಾಣಿಯಾಗಿದ್ದು, ನೋಡಲು ಮುದ್ದು ಮುದ್ದಾಗಿರುತ್ತದೆ. ಹಾಗಂತ, ಇದನ್ನ ಸಾಕುವ ತಪ್ಪು ಮಾತ್ರ ಯಾರೂ ಮಾಡಲ್ಲ. ಯಾಕಂದ್ರೆ, ಮನುಷ್ಯರು ಇದನ್ನ ಮುಟ್ಟಲು ಹೋದ್ರೆ, ಅವರನ್ನ ಗಾಯಗೊಳಿಸುತ್ತದೆ. ಅಲ್ಲದೇ, ಇದು ಮನುಷ್ಯರಿಂದ ದೂರವಿರಲು ಇಚ್ಛಿಸುತ್ತದೆ. ಹಾಗಾಗಿ ಈ ಬೆಕ್ಕನ್ನ ಸಾಕಲಾಗುವುದಿಲ್ಲ.
5.. ಖಾವ್ ಮಾನಿ. ಇದರ ವಿಶೇಷತೆ ಅಂದ್ರೆ ಈ ಜಾತಿಯ ಬೆಕ್ಕುಗಳು ಬಿಳಿ ಬಣ್ಣದ್ದಾಗಿರುತ್ತದೆ. ಮತ್ತು ಇದರ ಕಣ್ಣುಗಳು ಬೇರೆ ಬೇರೆ ಬಣ್ಣಗಳಿಂದ ಕೂಡಿರುತ್ತದೆ. ಒಂದು ಕಣ್ಣು ಹಳದಿ ಬಣ್ಣದ್ದಾಗಿದ್ದರೆ, ಇನ್ನೊಂದು ಕಣ್ಣು ನೀಲಿ ಬಣ್ಣದ್ದಾಗಿರುತ್ತದೆ.
- ಕೊನೆಯದಾಗಿ ಪರ್ಷಿಯನ್ ಕ್ಯಾಟ್. ಇದು ಪ್ರಪಂಚದಲ್ಲಿ ಹಲವು ಜನರು ಸಾಕುತ್ತಿರುವ ಬೆಕ್ಕು. ನೋಡಲು ಸುಂದರವಾದ, ಗೊಂಬೆಯಂತೆ ಕಾಣುವ ಈ ಬೆಕ್ಕು 5ರಿಂದ 15 ಸಾವಿರಕ್ಕೆ ಸಿಗುತ್ತದೆ. ಇದು ನೋಡೋಕ್ಕೇನೋ ಚಂದವಾಗಿರತ್ತೆ. ಇದಕ್ಕೆ ಬೇಕಾದ ಆಹಾರವನ್ನ ಕೂಡ ನಾವು ತಂದು ಕೊಡಬಹುದು. ಆದ್ರೆ ಇದನ್ನ ಬೆಳ್ಳಗಿರಿಸಲು ಮತ್ತು ಆರೋಗ್ಯಕರವಾಗಿ ಇರಿಸುವುದೇ, ಸಾಕುವವರಿಗೆ ಇರುವ ದೊಡ್ಡ ಟಾಸ್ಕ್.